ಸಾಲೋಟಗಿಯಲ್ಲಿ ಕರೊನಾ ತಪಾಸಣೆ

VMS 232
Published on

ವಿಜಯಪುರ: ಕರೊನಾ ಸೊಂಕು ಜಗತ್ತಿನಾದ್ಯಂತ ಜನರ ಜೀವದ ಮೇಲೆ ವೇಗವಾಗಿ ಹರಡುವ ಮೂಲಕ ದುಷ್ಪರಿಣಾಮ ಬೀರುತ್ತಿದೆ. ಅದರ ನಿಯಂತ್ರಣಕ್ಕೆ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ ಮತ್ತು ಕರ್ತವ್ಯ ಅಗತ್ಯವಾಗಿದೆ ಎಂದು ಪಿಡಿಒ ಎಲ್.ಎ್. ನದ್ಾ ಹೇಳಿದರು.

ಇಂಡಿ ತಾಲೂಕಿನ ಸಾಲೋಟಗಿ ಗ್ರಾಪಂ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಾರ್ವಜನಿಕರಿಗೆ ಕರೊನಾ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸರ್ಕಾರದೊಂದಿಗೆ ಕೈಜೋಡಿಸಬೇಕಲ್ಲದೆ, ಮಾಸ್ಕ್ ಧರಿಸುವ ಜತೆಗೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು. ಗ್ರಾಪಂ ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿದರು. ಸಮಾಜ ಕಾರ್ಯಕರ್ತರಾದ ಗುರುರಾಜ ನೇದಲಗಿ, ಶಿವಾನಂದ ನಂದಾಗೋಳ, ಮಲ್ಲಿಕಾರ್ಜುನ ಬಗಲಿ, ಶಿವಾನಂದ ಲೋಣಿ, ಕಲ್ಲಯ್ಯ ಹಿರೆಪಟ, ಸಿದ್ದರಾಯ ಅರಳಗುಂಡಗಿ, ಸುರೇಶ ಕರಿಹಾಳ, ಶಾಮರಾಯಗೌಡ ಪಾಟೀಲ, ವಿಠ್ಠಲ ಕುಂಬಾರ, ಚಿದಾನಂದ ಮೇತ್ರಿ, ಗಣೇಶ ಗುಂಡದ, ಚಿದಾನಂದ ಗೆರಡೆ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net