ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ

indi-16-2
Published on

ಇಂಡಿ: ತಾಲೂಕಿನ ಶಿರಶ್ಯಾಡ ಸಂಸ್ಥಾನ ಹಿರೇಮಠದಲ್ಲಿ ವಿಜಯಪುರ ಜಿಲ್ಲೆಯ ಮಠಾಧೀಶರ ಒಕ್ಕೂಟ ಸಭೆ ಶುಕ್ರವಾರ ನಡೆಯಿತು.

ಸಭೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು, ಸಾಮಾಜಿಕ, ಧಾರ್ಮಿಕ ಅಭಿವೃದ್ಧಿಗೊಳಿಸುವುದು ಮತ್ತು ಕರೊನಾ ನಿರ್ಮೂಲನೆಗೆ ಹಳ್ಳಿ-ಹಳ್ಳಿಗಳಿಗೂ ಅಭಿಯಾನ ಮಾಡಲು ಚರ್ಚಿಸಲಾಯಿತು.

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಮಠಾಧೀಶರ ಒಕ್ಕೂಟದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲು ಮನವಿ ಮಾಡಿಕೊಂಡ ಪ್ರಯುಕ್ತ ಸಿಎಂ ಜಿಲ್ಲೆಯ ನೀರಾವರಿ ಯೋಜನೆಗೆ 5,500 ಕೋಟಿ ರೂ. ಮೀಸಲಿಟ್ಟಿದ್ದಕ್ಕಾಗಿ ಸಭೆಯಲ್ಲಿ ಅವರನ್ನು ಅಭಿನಂದಿಸಲಾಯಿತು.

ಬಂಥನಾಳದ ವೃಷಭಲಿಂಗ ಮಹಾಸ್ವಾಮಿಗಳು, ಸಿಂದಗಿಯ ಪ್ರಭು ಸಾರಂಗದೇವ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯರು, ಬಬಲೇಶ್ವರದ ಮಹಾದೇವ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ಧಲಿಂಗ ಶಿವಾಚಾರ್ಯರು, ಮನಗೂಳಿಯ ಸಂಗನಬಸವ ಶಿವಾಚಾರ್ಯರು, ತಿಕೋಟಾ ಶಿವಬಸವ ಶಿವಾಚಾರ್ಯರು, ಆಲಮೇಲದ ಸಂಗನಬಸವ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ಧ ರೇಣುಕ ದೇವರು, ಬಳವಾಟ ಸೋಮಶೇಖರ ದೇವರು, ದೇವರಹಿಪ್ಪರಗಿಯ ಶಿಯೋಗಿ ದೇವರು, ಕುಂಟೋಜಿಯ ರುದ್ರಮುನಿ ದೇವರು, ಕರಬಂಟನಾಳದ ಶಿವಕುಮಾರ ಸ್ವಾಮಿಗಳು, ಡವಳಗಿ ಘನಮಠದ ಶಿವಯೋಗಿಗಳು, ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯರು, ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಮಡಿವಾಳೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net