ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಪ್ರಮುಖ

Indi-8-1
Published on

ಇಂಡಿ: ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಮಹಿಳೆಯರು ಸಾಧನೆಯ ಶಿಖರವನ್ನೇ ಏರಿದ್ದಾರೆ ಎಂದು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ.ಭಾರತಿ ಗಜಾಕೋಶ ಹೇಳಿದರು.

ಪಟ್ಟಣದ ಭಾರತಿ ಗಜಾಕೋಶ ಅವರ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಎಫ್ಓಜಿಎಸ್​ಐ, ಕೆಎಸ್‌ಓಜಿಎ ಆಶ್ರಯದಲ್ಲಿ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಅತ್ಯಂತ ಪ್ರಮುಖವಾಗಿದೆ. ಇಂದು ವಿಜ್ಞಾನ ತಂತ್ರಜ್ಞಾನ ಸಾಕಷ್ಟು ನಾಗಲೋಟದಲ್ಲಿ ಓಡುತ್ತಿದ್ದರೂ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ವಿಲರಾಗಿದ್ದೇವೆ. ಮನುಷ್ಯ ಎಲ್ಲ ಸಂಪತ್ತು ಗಳಿಸಬಹುದು. ಆದರೆ, ಆರೋಗ್ಯ ಸಂಪತ್ತು ಗಳಿಸುವುದು ದುರ್ಲಭ ಎಂದರು.

ಆರೋಗ್ಯ ಕಳೆದುಕೊಂಡರೆ ಉಳಿದ ಗಳಿಸಿದ ಎಲ್ಲ ಹಣ, ವಸ್ತಗಳು, ಆಭರಣ ಶೂನ್ಯ. ಆದ್ದರಿಂದ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ. ಇಂದು ದೇಶದಲ್ಲಿ ಅತೀ ಹೆಚ್ಚು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಲಿಂಗ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಕ್ಯಾನ್ಸರ್ ಕಂಡು ಹಿಡಿಯಲು ಉಚಿತ ಸ್ಕ್ರೀನಿಂಗ್ ಮಾಡಿ ಪತ್ತೆ ಹಚ್ಚಲಾಗುವುದು. ಇಂತಹ ಕ್ಯಾನ್ಸರ್‌ಗಳು ತಾಯಿಯಿಂದ ಮಗಳಿಗೆ ಹರಡುವ ಸಾಧ್ಯೆತೆ ಹೆಚ್ಚು ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಮಾತನಾಡಿದರು. ಸಿಪಿಐ ಆರ್.ಎಸ್. ಬಡೇದಾಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಶೋಕ ಗಜಾಕೋಶ, ಡಾ. ಪ್ರದೀಪ ಗಜಾಕೋಶ, ಡಾ. ಕಿರಣ ಗಜಾಕೋಶ, ಡಾ. ಪಲ್ಲವಿ ಗಜಾಕೋಶ, ಶಿವಾನಂದ ಭಾವಿಕಟ್ಟಿ, ಶೈಲಾ ಭಾವಿಕಟ್ಟಿ, ಮುತ್ತಣ್ಣಾ ಪೂಜಾರಿ, ಭಾಗ್ಯಶ್ರೀ ಹಾವಳಗಿ, ರೇಷ್ಮಾ ಕಟ್ಟಿಮನಿ, ಗೀತಾ ದಿಂಡೂರೆ. ಪೊಲೀಸ್ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net