

ಇಂಡಿ: ಸಿಎಎ, ಎನ್‌ಆರ್‌ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ಹಾಗೂ ಬಹಿರಂಗ ಸಭೆಯಲ್ಲಿ ವಿದ್ಯಾರ್ಥಿನಿ ಅಮೂಲ್ಯ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ವಿದ್ಯಾರ್ಥಿನಿ ಅಮೂಲ್ಯ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಸಭೆ ಸಮಾರಂಭಗಳು ನಡೆಯಲಿ, ಆದರೆ, ಸಿಎಎ, ಎನ್‌ಆರ್‌ಸಿ ವಿರೋಧಿಸುವ ನಿಟ್ಟಿನಲ್ಲಿ ದೇಶದ ಭಾವೈಕ್ಯತೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಭಾರತದ ಅನ್ನ ತಿಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ದೇಶದ್ರೋಹಿಗಳಿಗೆ ಸರ್ಕಾರ ಆ ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲುವಂತೆ ಆದೇಶಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಶಿವಾನಂದ ಮಲಕಗೊಂಡ ಮಾತನಾಡಿದರು. ಯುವ ಮುಖಂಡ ಪ್ರಭುಗೌಡ ಪಾಟೀಲ, ರಾಜಕುಮಾರ ಗುಂಜಟಗಿ, ಭೀಮಾಶಂಕರ ಆಳೂರ, ಶೀತಲ ಬಿರಾದಾರ, ಸುಧೀರ್ ಅಂಬಿಗೇರ, ಶಿವು ಬಿಸನಾಳ, ಸಂತೋಷ ಉಪ್ಪಾರ, ಸುರೇಶ ಕಡ್ಲೇವಾಡ, ಶಿವಾಜಿ ಜಾಧವ, ಮಾಧು ಹಳ್ಳದಮನಿ, ಶ್ರೀಧರ ಕುಡಿಗನೂರ, ಶರಣು ಖೇರವಿಕರ್, ಅರವಿಂದ ಪಾಟೀಲ ಮತ್ತಿತರರಿದ್ದರು.