ತೊಗರಿ ಖರೀದಿ ಕೇಂದ್ರ ಉದ್ಘಾಟನೆ

Indi-14-1
Published on

ಇಂಡಿ: ಪಟ್ಟಣದ ಎಪಿಎಂಸಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಣ್ಣಪ್ಪ ಪೂಜಾರಿ ಅವರು ತೂಕದ ಯಂತ್ರ ಹಾಗೂ ಜರಡಿಗಳಿಗೆ ಪೂಜೆ ಸಲ್ಲಿಸುವ ಮೂಲಕ ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ತೊಗರಿ ಬೆಳೆಗಾರರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ರೈತರು ಅದರ ಸದುಪಯೋಗ ಪಡೆಯಬೇಕೆಂದು ಹೇಳಿದರು.

ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅಣ್ಣಾಗೌಡ ಬಿರಾದಾರ, ಶ್ರೀನಿವಾಸ ಕುಲಕರ್ಣಿ ಎಪಿಎಂಸಿ ನಿರ್ದೇಶಕ ಸಿದ್ದನಗೌಡ ಪಾಟೀಲ, ಶಿವು ನಿಡಗುಂದಿ, ಅಣ್ಣುಗೌಡ ಪಾಟೀಲ ಹಳಗುಣಕಿ, ಅಪ್ಪುಗೌಡ ಬಿರಾದಾರ, ರೇವಣಸಿದ್ದ ಹೊಸಮನಿ, ಶಾಂತಯ್ಯ ಮಠ, ಗಂಗಾಧರ ಹೊಸಮನಿ, ಕೃಷ್ಣ ಕುಲಕರ್ಣಿ, ಆನಂದ ಕುಲಕರ್ಣಿ, ಸಿದ್ದನಗೌಡ ಪಾಟೀಲ, ಅಪ್ಪುಗೌಡ ಪಾಟೀಲ ವ್ಯವಸ್ಥಾಪಕ ಆರ್.ಜಿ. ಕಾವಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net