ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ

Indi-26-3
Published on

ಇಂಡಿ: ಚಿತ್ರದುರ್ಗ ಜಿಲ್ಲೆಯ ಬ್ರಹ್ಮಸಾಗರ ಹೋಬಳಿ ವ್ಯಾಪ್ತಿಯ ಇಸಾಮುದ್ರಾ ಗ್ರಾಮದ ಉಪ್ಪಾರ ಸಮಾಜದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ವೆಸಗಿ ಕೊಲೆಗೈದ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಇಂಡಿಯ ಶ್ರೀ ಭಗೀರಥ ಸೇವಾ ಸಂಘ ಹಾಗೂ ಗಿರೀಶ ಉಪ್ಪಾರ ಅಭಿಮಾನಿ ಬಳಗ, ಕರವೇ ಕಾರ್ಯಕರ್ತರು ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಬಾಲಕಿ ಕುಟುಂಬಕ್ಕೆ ರಕ್ಷಣೆ ನೀಡಿ, ಸೂಕ್ತ ಪರಿಹಾರ ಒದಗಿಸಬೇಕು. ಒಂದು ವೇಳೆ ನ್ಯಾಯ ದೊರೆಯದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಕರಂಡೆ, ಉಪಾಧ್ಯಕ್ಷ ಅನೀಲ ರೆಬಿನಾಳ, ಕರವೇ ಅಧ್ಯಕ್ಷ ಬಾಳು ಮುಳಜಿ, ಅಶೋಕ ಬಗಲಿ, ಸಂತೋಷ ಖಷ್ಕಿ, ಸೋಮಶೇಖರ ಬ್ಯಾಳಿ, ಚಿದಾನಂದ ಉಪ್ಪಾರ, ಮಳಸಿದ್ಧ ಗೊಬ್ಬುರ, ಚಂದ್ರಶೇಖರ ಸೊನ್ನ, ಶ್ರೀಶೈಲ ಮದರಿ, ಶಿವು ಉಪ್ಪಾರ, ಈರಣ್ಣ ಉಪ್ಪಾರ, ಮಂಜುನಾಥ ಮದರಿ, ಇಂಡಿಯ ಶ್ರೀ ಭಗೀರಥ ಸೇವಾ ಸಂಘ ಹಾಗೂ ಗಿರೀಶ ಉಪ್ಪಾರ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net