ನಿರಾಶ್ರಿತರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ

INDI 1-1
Published on

ಇಂಡಿ: ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಸಾವಿರಾರು ಬಡ ಕುಟುಂಬಗಳು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗೆ 110 ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಬಸವರಾಜ ಕುಮಸಗಿ ಆಹಾರ ಸಾಮಗ್ರಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಇದು ಪ್ರಥಮ ಹಂತದ ಕಿಟ್ ವಿತರಣೆ ಕಾರ್ಯಕ್ರಮವಾಗಿದ್ದು, ಇನ್ನಷ್ಟು ನಿರ್ಗತಿಕರಿಗೆ, ಬಡವರಿಗೆ ಕೆಲವೇ ದಿನಗಳಲ್ಲಿ ಆಹಾರ ಧಾನ್ಯಗಳ ಕಿಟ್‌ನ್ನು ವಿತರಿಸಲಾಗುವುದೆಂದು ತಿಳಿಸಿದರು.

ಕೆ.ಇ.ಬಿ. ಹತ್ತಿರದ ಜೋಪಡಿ, ಸರ್ಕಾರಿ ಗೋದಾಮಿನ ಬಳಿಯ ಜೋಪಡಿಗಳ ನಿರಾಶ್ರಿತರಿಗೆ ಹಾಗೂ ಎಪಿಎಂಸಿ ಕೂಲಿ ಕೆಲಸ ಮಾಡುವ ಮಹಿಳೆಯರಿಗೆ ಕಿಟ್ ವಿತರಿಸಲಾಯಿತು. ಸಂಸ್ಥೆ ಗೌರವ ಕಾರ್ಯದರ್ಶಿ ಪಿ.ಬಿ. ಕತ್ತಿ, ಹಿರಿಯ ನಿರ್ದೇಶಕರಾದ ಎಸ್.ಎಸ್. ದೇಸಾಯಿ, ಡಿ.ಸಿ ಸುರಪೂರ, ಎಸ್.ವಿ. ಕಕ್ಕಳಮೇಲಿ, ಸಿದ್ರಾಮಪ್ಪ ಸೊಡ್ಡಿ, ಪ್ರೇಮಾನಂದ ಕಡಕೋಳ ಸೇರಿ ಸಂಸ್ಥೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net