ಎಂಇಎಸ್, ಶಿವಸೇನೆ ಸಂಘಟನೆ ನಿಷೇಧಿಸಿ

INDI-18-4B
Published on

ಇಂಡಿ: ರಾಜ್ಯದಲ್ಲಿ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣದ) ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಆರ್.ಎಸ್.ರೇವಡಿಗಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಕರವೇ ಸಂಚಾಲಕ ಶ್ರೀಶೈಲ ಮುಳಜಿ, ತಾಲೂಕು ಅಧ್ಯಕ್ಷ ಶಿವಾನಂದ ಮಲಕಗೊಂಡ ಮಾತನಾಡಿ, ಕರ್ನಾಟಕದ ಬೆಳಗಾವಿ ವಿಷಯದಲ್ಲಿ ಪದೇ ಪದೆ ಖ್ಯಾತೆ ತೆಗೆದು ತಾಯಿ ಭುವನೇಶ್ವರಿಯ ಶವಯಾತ್ರೆ ಮಾಡಿ, ಕನ್ನಡ ನಾಡಧ್ವಜ ಸುಟ್ಟು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳ ಕಾರ್ಯಕರ್ತರಿಗೆ ಉಗ್ರ ಶಿಕ್ಷೆ ನೀಡಬೇಕು ಮತ್ತು ಆ ಸಂಘಟನೆಗಳನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಶಿವಸೇನೆ ಮುಖಂಡರಿಗೆ ಮಶಿ ಬಳಿದ ಕನ್ನಡಿಗರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದು ಕನ್ನಡಿಗರ ಒಕ್ಕೊರಲಿನ ಬೇಡಿಕೆಯಾಗಿದ್ದು, ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು. ಅಯೂಬ ನಾಟಿಕಾರ, ಪ್ರಭು ಬಬಲೇಶ್ವರ, ಶಿವು ಬರಡೋಲ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಭು ಬಬಲೇಶ್ವರ, ಜಗದೀಶ ಕುಂಬಾರ, ಅಯೂಬ ನಾಟಿಕಾರ, ಭೀಮಾಶಂಕರ ಆಳೂರ, ಮಂಜು ತೇಲಿ, ಪಿಂಟು ಪಾಟೀಲ, ವಾಯಿದ್ ಮುಜಾವರ್, ಶಿವಕುಮಾರ ಬರಡೋಲ, ಅರವಿಂದ ಪಾಟೀಲ, ಮುಜ್ಜು ಬಾಗವಾನ, ಶ್ರೀಶೈಲ ಹದಗಲ್, ಸನಾವುಲ್ ಗೂಗಿಹಾಳ, ಸದ್ದಾಂ ವಾಲಿಕಾರ, ಶ್ರೀಶೈಲ ಮಲಕಗೊಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net