ಕಾರ್ಮಿಕ ಇಲಾಖೆಯಲ್ಲಿಯೇ ಆಚರಿಸದ ದಿನಾಚರಣೆ

Indi, International Workers' Day, Public Outrage, Municipal Workers, Attitude of Officials,
ಇಂಡಿಯ ಆಡಳಿತ ಸೌಧದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಬೀಗ ಹಾಕಿರುವುದು.
Published on

ಇಂಡಿ : ಮೇ ಒಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನ. ಎಲ್ಲ ಕಡೆಗಳಲ್ಲಿ ಆಚರಿಸಲಾಗುತ್ತದೆ. ಆದರೆ ಇಲ್ಲಿನ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಆಚರಿಸದಿರುವುದು ಕಾರ್ಮಿಕ ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮೊದಲು ಕಾರ್ಮಿಕರ ದಿನಾಚರಣೆ ದಿನ ಕಟ್ಟಡ ಕಾರ್ಮಿಕರು ಎತ್ತಿನ ಬಂಡೆಯ ಕೆಲಸ ಮಾಡುವ ಕಾರ್ಮಿಕರು, ಪುರಸಭೆಯ ಕಾರ್ಮಿಕರು, ಅನೇಕ ಕಾರ್ಮಿಕ ವರ್ಗ ಸೇರಿ ಎತ್ತಿನ ಬಂಡೆಯೊಂದಿಗೆ ಮೆರವಣಿಗೆ ನಡೆಸಿ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದರು.

ಆದರೆ ಈ ಬಾರಿ ಆಚರಿಸಲಿಲ್ಲ. ಕನಿಷ್ಠ ಬಾಗಿಲು ತೆಗೆದು ಕಾರ್ಮಿಕ ವರ್ಗಕ್ಕೆ ಗೌರವಿಸುವ ಕಾರ್ಯವನ್ನಾದರೂ ಇಲಾಖೆ ಅಧಿಕಾರಿಗಳು ಮಾಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿರುವ ಬೇರೆ ಬೇರೆ ಇಲಾಖೆಯಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರನ್ನು ಗೌರವಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಿಸಬೇಕಿತ್ತು. ಈ ಬಾರಿ ಮಾತ್ರ ಅದ್ಯಾವುದೂ ನಡಯಲೇ ಇಲ್ಲ. ಈ ಕುರಿತು ಹಲವಾರು ಕಾರ್ಮಿಕರು ಇಲಾಖೆಗೆ ಬಂದು ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮತ್ತು ಕನಿಷ್ಠ ಪಕ್ಷ ಇಲಾಖೆ ಬಾಗಿಲು ತೆಗೆದು ಸರಳ ರೂಪದಲ್ಲಾದರೂ ಆಚರಣೆ ಮಾಡಬೇಕಾಗಿತ್ತು ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಾರ್ಮಿಕರ ಶ್ರೇಯೋಭಿವೃದ್ಧ್ಧಿಗಾಗಿಯೇ ಇರುವ ಕಾರ್ಮಿಕ ಇಲಾಖೆ ಕಚೇರಿ ಕಾರ್ಮಿಕ ದಿನದಂದು ಬಾಗಿಲು ಮುಚ್ಚಿರುವುದು ದುರದೃಷ್ಟಕರ ಸಂಗತಿ. ಸಂಬಂಧಿಸಿದ ಮೇಲಧಿಕಾರಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. -ನಾಗರಾಜ ದಶವಂತ, ಸಾಮಾಜಿಕ ಕಾರ್ಯಕರ್ತ, ಇಂಡಿ ಅನಾರೋಗ್ಯದ ಕಾರಣ ನನಗೆ ಕಚೇರಿಗೆ ಬರಲು ಆಗಲಿಲ್ಲ. ಸಿಬ್ಬಂದಿಗಳು ಕಾರ್ಮಿಕ ದಿನ ಆಚರಿಸಿದ್ದಾರೆ. -ದತ್ತು ದೇವರಮನಿ, ಕಾರ್ಮಿಕ ಇಲಾಖೆ ಅಧಿಕಾರಿ, ಇಂಡಿ ಕಾರ್ಮಿಕ ಇಲಾಖೆಯಿಂದ ವರದಿ ತರಿಸಿಕೊಂಡು ಕಾರ್ಮಿಕ ಇಲಾಖೆ ಮುಖ್ಯಸ್ಥರಿಗೂ ಮತ್ತು ಜಿಲ್ಲಾಧಿಕಾರಿಗೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸುತ್ತೇನೆ. -ಅನುರಾಧಾ ವಸದ, ಕಂದಾಯ ಉಪ ವಿಭಾಗಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net