

ಇಂಡಿ: ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಆದ್ಯತೆ ನೀಡುವುದರ ಜತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಬಿಜೆಪಿ ಪಕ್ಷ ಆದ್ಯತೆ ನೀಡಿದೆ ಎಂದು ಪಕ್ಷದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಭಾನುವಾರ ಹಮ್ಮಿಕೊಂಡ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಶೀಲವಂತ ಉಮರಾಣಿ ಮಾತನಾಡಿ, ಪ್ರತಿ ಕುಟುಂಬದ ನಿರ್ವಹಣೆ ಆ ಮನೆಯ ಹೆಣ್ಣು ಮಕ್ಕಳ ಮೇಲಿರುತ್ತದೆ. ಆ ಎಲ್ಲ ಜವಾಬ್ದಾರಿ ನಿರ್ವಹಿಸಿ ಮಹಿಳೆಯರು ಕೆಲಸ ಕಾರ್ಯದಲ್ಲಿ ತೊಡಗುತ್ತಾರೆ. ಹೀಗಾಗಿ ಹೆಣ್ಣು ಮಕ್ಕಳನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ದೃಢ ಸಂಕಲ್ಪ ಮಾಡಬೇಕು ಎಂದರು.
ಮಹಿಳೆಯರಿಗೆ ಅತಿ ಹೆಚ್ಚು ಅಧಿಕಾರ, ಸ್ಥಾನಮಾನ ನೀಡಿದ ಪಕ್ಷ ಯಾವುದಾದರು ಇದ್ದರೆ ಅದು ಬಿಜೆಪಿ ಎಂದರು. ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ರೂಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷೆ ಭೌರಮ್ಮ ಮುಳಜಿ, ಪ್ರಧಾನ ಕಾರ್ಯದರ್ಶಿ ಭಾರತಿ ಬುಯ್ಯರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶಿವಯೋಗಿ ರೂಗಿಮಠ, ಶಂಕರಗೌಡ ಪಾಟೀಲ, ರಮೇಶ ಧರೆನ್ನವರ, ಮಲ್ಲು ವಾಲಿಕಾರ, ದತ್ತಾ ಬಂಡೆನವರ, ಸಚಿನ ಬೊಳೆಗಾಂವ, ಅಶೋಕಗೌಡ ಬಿರಾದಾರ, ಅನಸೂಯಾ ಮದರಿ, ಕವಿತಾ ಅಳ್ಳೊಳ್ಳಿ, ಸುನಂದಾ ಗಿರಣಿವಡ್ಡರ, ವಿಜಯಲಕ್ಷ್ಮೀ ಪಾಂಡೆ, ಇಂದುಮತಿ ಪವಾರ, ದಿಶಾ ಚಿಕ್ಕನಾದ, ಮಂಗಲಾ ಮಠಪತಿ, ದೀಪಾ ಬರಡೋಲ, ರಾಣಿ ಕ್ಷತ್ರಿ, ಮಹಾದೇವಿ ಬಡಿಗೇರ, ಭೌರಮ್ಮ ಕವಟಗಿ, ಸುಲೋಚನಾ ಗಿಣ್ಣಿ, ಭೌರಮ್ಮ ನಾವಿ ಇತರರಿದ್ದರು.
ವಿಜಯಲಕ್ಷ್ಮೀ ಪಾಂಡೆ ಸ್ವಾಗತಿಸಿದರು. ಸುನಂದಾ ಗಿರಣಿವಡ್ಡರ ನಿರೂಪಿಸಿದರು.