ಇಂಡಿ ಡಿವೈಎಸ್ಪಿ ಅಮಾನತಿಗೆ ಒತ್ತಾಯ

VMS 22-9
Published on

ವಿಜಯಪುರ: ದಲಿತ ಮುಖಂಡ ವೈ.ಸಿ. ಮಯೂರ ವಿರುದ್ಧ ಖೊಟ್ಟಿ ಪ್ರಕರಣಗಳನ್ನು ಸೃಷ್ಟಿಸಿರುವ ಇಂಡಿ ಡಿವೈಎಸ್‌ಪಿ ಎಂ.ಬಿ. ಸಂಕದ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ ಮಾತನಾಡಿ, ವೈ.ಸಿ. ಮಯೂರ ಅವರು ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಮೇಲ್ವರ್ಗದ ರಾಜಕಾರಣಿಗಳು ವೈ.ಸಿ. ಮಯೂರರ ಏಳಿಗೆ ಸಹಿಸದೇ ಇಂತಹ ಹೇಳಿಕೆ ಕೊಟ್ಟಿದ್ದಾರೆ ಎಂದು ದೂರಿದರು.
ವಿನಾಯಕ ಗುಣಸಾಗರ, ಸಿದ್ದು ರಾಯಣ್ಣವರ ಮಾತನಾಡಿ, ವೈ.ಸಿ. ಮಯೂರ ಅವರ ಒಳ್ಳೆಯತನ ಸಹಿಸದೆ ಅವರ ಮೇಲೆ ದೋಷಾರೋಪಣೆ ಮಾಡಲಾಗುತ್ತಿದೆ. ಕೂಡಲೇ ಅವರನ್ನು ಆರೋಪದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಶರಣು ಶಿಂಧೆ, ಅಶೋಕ ಚಲವಾದಿ, ಪರಶುರಾಮ ದಿಂಡವಾರ, ಮಂಜುನಾಥ ಯಂಟಮಾನ, ರಾಮ ದೊಡ್ಡಮನಿ, ಬಾಬು ಗುಡಿಮನಿ, ಪ್ರಕಾಶ ಗುಡಿಮನಿ, ರಾಜು ತೊರವಿ, ಶರಣ ಕುಮಾರ ನಾಟಿಕಾರ, ನಾಗೇಶ ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net