

ಇಂಡಿ: ಪಟ್ಟಣದ ಅಂಬಾಭವಾನಿ ನವ ತರುಣ ಮಂಡಳಿ ಚವಡಿ ಓಣಿ, ದುರ್ಗಾ ಪರಮೇಶ್ವರಿ ಮಿತ್ರ ಮಂಡಳಿ ಬೀರಪ್ಪ ನಗರ, ಭುವನೇಶ್ವರಿ ಯುವಕ ಮಂಡಳಿ ಕುಂಬಾರ ಓಣಿ ಹಾಗೂ ಅಂಬಾಭವಾನಿ ನವ ತರುಣ ಮಂಡಳಿ ಹೂಗಾರ ಓಣಿ ವತಿಯಿಂದ ಸಂಭ್ರಮದ ದೇವಿಯ ಮೆರವಣಿಗೆ ಗುರುವಾರ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ವಿವಿಧ ಸ್ಥಳಗಳ ದೇವಿ ಮೂರ್ತಿಗಳ ಮೆರವಣಿಗೆ ಸಂಭ್ರಮದಿಂದ ಜರುಗಿತು. ಕುಂಬಾರ ಓಣಿಯ ದೇವಿಯ ಮೆರವಣಿಗೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು. ಸತೀಶ ಕುಂಬಾರ, ದೇವೇಂದ್ರ ಕುಂಬಾರ, ವೀರಬಸು ಅರಳಿ, ಭೀಮನಗೌಡ ಪಾಟೀಲ ಇತರರಿದ್ದರು.
ಡೊಳ್ಳು ಕುಣಿತ, ಕೋಲಾಟ, ಲೇಜಿಮ್, ಭಜನೆ, ಗೊಂದಳಿ ಭಜನೆ, ಮೆರವಣಿಗೆಯ ಆಕರ್ಷಣೆಯಾಗಿತ್ತು. ಎಲ್ಲೆಡೆ ಅಂಬಾಭವಾನಿ ಉಧೋ ಉಧೋ, ಇಂಡಿಯ ತಾಯಿಗೆ ಉಧೋ ಉಧೋ ಜಯಘೋಷ ಮೊಳಗಿದವು.
ಭಕ್ತರು ಕೇಸರಿ ಟೋಪಿ ಧರಿಸಿ ಕೊರಳಲ್ಲಿ ಕೇಸರಿ ಶಲ್ಯ ಹಾಕಿಕೊಂಡಿದ್ದರು. ಭಕ್ತರು ತಮ್ಮ ಮನೆಯ ಮುಂದೆ ದೇವಿಯ ಮೆರವಣಿಗೆ ಬಂದಾಗ ನೀರು ಹಾಕಿ ಪೂಜೆ ಸಲ್ಲಿಸಿದರು.