ಇಂಡಿ ಪಟ್ಟಣದ ಮೂವರ ಬಂಧನ

Betting
Published on

ವಿಜಯಪುರ: ಜಿಲ್ಲೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಜೋರಾಗಿದ್ದು, ಮಂಗಳವಾರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂಡಿ ಪಟ್ಟಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿವಪುತ್ರ ಚಂದ್ರಾಮ ಬಗಲಿ (31), ಚಂದ್ರಕಾಂತ ಭೈರಪ್ಪ ಪಾಟೀಲ (24) ಹಾಗೂ ಸಾಯಬಣ್ಣ ಊರ್ಫ್ ವಿಜಯ ವಾಸುದೇವ ಮೂರಮನ (34) ಬಂಧಿತರು. ಅವರಿಂದ 3 ಲಕ್ಷ ರೂ., 10 ಮೊಬೈಲ್ ಹಾಗೂ ಟಿವಿ ವಶಪಡಿಸಿಕೊಳ್ಳಲಾಗಿದೆ.
ಎಸ್‌ಪಿ ಅನುಪಮ್ ಅಗರವಾಲ್ ಹಾಗೂ ಎಎಸ್‌ಪಿ ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಡಿಸಿಐಬಿ ಪಿಐ ಸಿ.ಬಿ. ಬಾಗೇವಾಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net