ಪರಿಹಾರ ಕಂಡುಕೊಳ್ಳಲು ಸಹಕಾರಿ

Indi-17-2
Published on

ಇಂಡಿ: ಸ್ಥಳೀಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.ತಾಲೂಕಿನ ಬಸನಾಳ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪತಹಸೀಲ್ದಾರ್ ಎ.ಎಸ್. ಗೋಟ್ಯಾಳ ಮಾತನಾಡಿ, ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸರ್ಕಾರಿ ಜಾಗವನ್ನು ಗುರುತಿಸುವ ಕೆಲಸ ಸೇರಿದಂತೆ ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಹಾಗೂ ನಾನಾ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ತಾಪಂಗೆ ಸಂಬಂಧಿಸಿದ 8, ಕೆಬಿಜೆಎನ್‌ಎಲ್ 2, ಬಿಇಒ ಕಚೇರಿ 4, ಕೃಷಿ ಇಲಾಖೆ 2, ಸಾರಿಗೆ ಸಂಸ್ಥೆ 3, ಪಿಂಚಣಿ 12 , ಉತಾರ ತಿದ್ದುಪಡಿ 14, ಲೋಕೊಪಯೋಗಿ 2, ಜಿಪಂ 4, ಸಿಡಿಪಿಒ ಒಂದು, ಉಪನೋಂದಣಿ ಇಲಾಖೆಗೆ ಸಂಬಂಧಿಸಿದ ಒಂದು ಅರ್ಜಿ ಬಗ್ಗೆ ಚರ್ಚಿಸಿ ಪರಿಹಾರ ಸೂಚಿಸಲಾಯಿತು.

15 ಜನರಿಗೆ ಸ್ಥಳದಲ್ಲಿಯೇ ಪಿಂಚಣಿ ಮಂಜೂರಾತಿ ಪತ್ರಗಳನ್ನು ತಹಸೀಲ್ದಾರ್ ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಗಂಗುಬಾಯಿ ನಾಯ್ಕೋಡಿ, ಪಿಡಿಒ ಬಾಬು ಉಮದಿ, ಗ್ರೇಡ್ 1 ತಹಸೀಲ್ದಾರ್ ಆರ್.ಎಸ್. ರೇವಡಿಗಾರ, ಪಶು ವೈದ್ಯಾಧಿಕಾರಿ ಕನ್ನೂರ, ಸಿಡಿಪಿಒ ಸುಮಂಗಲಾ ಹಿರೇಮನಿ, ಅರಣ್ಯ ಇಲಾಖೆಯ ಧರ್ಮರಾಜ ಮುಜಗೊಂಡ, ಗ್ರಾಪಂ ಸದಸ್ಯರಾದ ಹುಸೇನಿ ಜಿಗಜಿಣಗಿ, ಸತ್ತೆವ್ವ ಪೂಜಾರಿ, ತಿಪ್ಪಣ್ಣ ಜಿಗಜಿಣಗಿ, ಮಲ್ಲು ಬಗಲಿ, ಪ್ರೇಮಾ ಸಾವಕಾರ, ದೌಲಾಬಾಯಿ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net