

ಇಂಡಿ: ಸಹಕಾರ ಸಂಘಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದ್ದು, ಸೌಹಾರ್ದ ಸಹಕಾರಗಳು ಬಡ ಜನರಿಗೆ ದಾರಿದೀಪವಾಗಿವೆ ಎಂದು ಕೆಸರಟ್ಟಿಯ ಸೋಮನಿಂಗ ಮಹಾರಾಜರು ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಂಜಾರ ಸೌಹಾರ್ದ ಸಹಕಾರಿಯ ಉದ್ಘಾಟನೆ, ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಕೆಲವೊಂದೇ ಸಂಸ್ಥೆಗಳು ನಡೆಯುತ್ತಿವೆ. ಆಡಳಿತ ಮಂಡಳಿಯವರು ಸೌಹಾರ್ದತೆ ಮತ್ತು ಏಕತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ಮಾಡಿದಾಗ ಮಾತ್ರ ಸಂಸ್ಥೆಗಳು ಬೆಳೆಯುತ್ತವೆ ಎಂದರು.
ವಿಜು ರಾಠೋಡ, ಹಣಮಂತ್ರಾಯಗೌಡ ಪಾಟೀಲ ಮಾತನಾಡಿ, ಸೌಹಾರ್ದ ಸಹಕಾರಿಯಿಂದ ಉತ್ತಮ ಸೇವೆ ನೀಡಿ ಮಾದರಿ ಸಂಘವನ್ನಾಗಿ ಮಾಡಿ, ಲಾಭದ ಜತೆಗೆ ಸಾಮಾಜಿಕ ಸೇವೆಗೂ ಆಧ್ಯತೆ ನೀಡಬೇಕೆಂದರು.
ಹಡಲಸಂಗದ ಪ್ರಕಾಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸೌಹಾರ್ದದ ಅಧ್ಯಕ್ಷ ಲಿಂಬು ವಾ. ರಾಠೋಡ ಅಧ್ಯಕ್ಷತೆ ವಹಿಸಿದ್ದರು. ವಿವೇಕ ರಾಠೋಡ, ಸಂಜು ಚವ್ಹಾಣ್, ಮಲ್ಲಿಕಾರ್ಜುನ ಕಿವುಡೆ, ಅನೀಲ ಜಮಾದಾರ, ಕಾಸುಗೌಡ ಬಿರಾದಾರ, ವಿಶ್ವನಾಥ ಚವ್ಹಾಣ್, ಗೋವಿಂದ ರಾಠೋಡ, ಸಂಜು ಜಾಧವ, ಮೋಹನ್ ರಾಠೋಡ, ಕಂಟೆಪ್ಪ ಚವ್ಹಾಣ್, ಮಲ್ಲು ವಾಲೀಕಾರ, ಬಾಬು ರಾಠೋಡ, ಸುರೇಶ ಚವ್ಹಾಣ್, ಬೇಬಿತಾ ಚವ್ಹಾಣ್, ಗೋಪು ರಾಠೋಡ, ಗಣಪತಿ ರಾಠೋಡ, ಅಶೋಕ ರಾಠೋಡ, ವಿಕ್ರಮ ರಾಠೋಡ, ಸರ್ಜನ ಜಾಧವ, ಇಲಿಯಾಸ ಬೋರಾಮಣಿ, ಟಿ.ಎಸ್. ಖಟ್ಟೆ, ದೇವೆಂದ್ರ ಕುಂಬಾರ ಮತ್ತಿತರರಿದ್ದರು.