ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Indi, ABVP, Protest, State Govt, Bus fare, Ganesh Hanjagi, Sachin Donagonda, Rahul Jadhav, Mahesh Munnalli,
ಇಂಡಿ ಪಟ್ಟಣದಲ್ಲಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
Published on

ಇಂಡಿ: ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಎಬಿವಿಪಿ ನಗರ ಕಾರ್ಯದರ್ಶಿ ಗಣೇಶ ಹಂಜಗಿ ಮಾತನಾಡಿ, ಬಸ್ ಪ್ರಯಾಣ ದರ ಶೇ.15 ರಷ್ಟು ಹೆಚ್ಚಿಸಿರುವುದು ಖಂಡನೀಯ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳು ಸಂದರ್ಶನಗಳಿಗೆ ಹೋಗಲು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ಅದಲ್ಲದೆ ಎಲ್ಲ ದರಗಳು ಹೆಚ್ಚಿದ್ದು ಬಸ್ ದರ ಹೆಚ್ಚಿಸಿದರೆ ಸಾಮಾನ್ಯರ ಜೀವನ ದುಸ್ತರವಾಗುತ್ತದೆ ಎಂದರು.

ಪ್ರಧಾನ ಕಾರ್ಯದರ್ಶಿ ಸಚಿನ ದಾನಗೊಂಡ, ರಾಹುಲ್ ಜಾಧವ, ಮಹೇಶ ಮುನ್ನಳ್ಳಿ, ಅಂಬರಿಷ ಬಿರಾದಾರ, ದರ್ಶನ ಹರಿಜನ, ಸಂದೀಪ ಜೇವೂರ, ಸಂದೀಪ ಪರೀಟ, ಸಮರ್ಥ ಗಾಯಕವಾಡ, ಪ್ರತೀಕ ಹಂಜಗಿ, ಮಂಜುನಾಥ ಪೂಜಾರಿ, ರಾಮು ಹೂಗಾರ ಮತ್ತಿತರರಿದ್ದರು.

ವಿದ್ಯಾರ್ಥಿಗಳು ಶಾಂತೇಶ್ವರ ಪದವಿ ಮಹಾವಿದ್ಯಾಲಯ, ಮಿನಿ ವಿಧಾನಸೌಧ, ಬಸವೇಶ್ವರ ವೃತ್ತದ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net