ಸಹಿಷ್ಣುತೆ ಸಂರಕ್ಷಣೆಯೇ ಈಗಿನ ಸವಾಲು; ಸಾಹಿತಿ ಬರಗೂರ ರಾಮಚಂದ್ರಪ್ಪ ಅಭಿಪ್ರಾಯ; ಸೌಹಾರ್ದ ಭಾರತ ಉಪನ್ಯಾಸ ಮಾಲಿಕೆ

23102022 sindhanour writer baragur ramchandrappa
Published on

ಸಿಂಧನೂರು: ಜಾತಿ ಮತ್ತು ಧರ್ಮಗಳು ರಾಜಕೀಯ ಅಸ್ತ್ರಗಳಾಗಿ ಭವ್ಯ ಭಾರತ ಗಾಯಗೊಂಡಿದೆ. ಅದಕ್ಕಾಗಿ ದ್ವೇಷಾತೀತವಾದ ಭಾರತವನ್ನು ಒಗ್ಗೂಡಿಸುವ ಮಹತ್ತರ ಕೆಲಸ ನಡೆಯಬೇಕಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಬಸವಕೇಂದ್ರದಲ್ಲಿ ಕಸಾಪ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸೌಹಾರ್ದ ಭಾರತ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಭಾನುವಾರ ಉಪನ್ಯಾಸ ನೀಡಿದರು. ಜಾತಿಗಳನ್ನು ವಾಸ್ತವವಾಗಿ ಕಾಣುವುದಕ್ಕೂ, ಜಾತಿವಾದ ಮಾಡುವುದಕ್ಕೂ ವ್ಯತ್ಯಾಸವಿದೆ. ಧಾರ್ಮಿಕತೆಗೂ, ಧಾರ್ಮಿಕ ಮೂಲಭೂತವಾದಕ್ಕೂ ಅಂತರವಿದೆ. ಜಾತಿವಾದವು ಜಾತಿಗಳಲ್ಲೇ ಶ್ರೇಷ್ಠ ಮತ್ತು ಕನಿಷ್ಠಗಳನ್ನು ನಿರ್ಧರಿಸಿ ಶೋಷಣೆಯ ಸಾಧನವಾಗಿದೆ. ಧಾರ್ಮಿಕ ಮೂಲಭೂತವಾದವು ಅಂತರಿಕ ಸುಧಾರಣೆಯನ್ನು ನಿರಾಕರಿಸುವ ಜಡಶಾಸ್ತ್ರಕ್ಕೆ ಬೆಲೆ ಕೊಡುತ್ತದೆ. ಅನ್ಯಧರ್ಮ ದ್ವೇಷಕ್ಕೆ ಅಸ್ತ್ರವಾಗುತ್ತದೆ. ಧರ್ಮ ಮೂಲಭೂತವಾಗದಂತೆ ಸಮಾನತೆ ಮತ್ತು ಸಹಿಷ್ಣುತೆಗಳನ್ನು ಸಂರಕ್ಷಿಸುವ ಸವಾಲು ನಮ್ಮೆದರು ಇದೆ. ಜಾತಿಗಳು ಜೈಲಾಗಬಾರದು, ಧರ್ಮಗಳು ದ್ವೀಪಗಳಾಗಬಾರಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net