

ಸಿಂಧನೂರು: ರಾಜ್ಯ ಸರ್ಕಾರ ರೈತಪರ ಕೆಲಸ ಮಾಡುತ್ತಿದೆ. ಈಗಾಗಲೇ ಮುಂಗಾರು ಹಂಗಾಮಿನ ಜೋಳ ಖರೀದಿ ಬೆನ್ನಲ್ಲೇ ಹಿಂಗಾರು ಜೋಳ ನೋಂದಣಿ, ಖರೀದಿಗೂ ಆದೇಶಿಸಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತುರ್ವಿಹಾಳ ಎಪಿಎಂಸಿ ಗೇಟ್-1 ರಲ್ಲಿ ಶನಿವಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಜೋಳ ನೋಂದಣಿ ಮತ್ತು ಖರೀದಿ ಕೇಂದ್ರವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಕ್ವಿಂ.ಸಾಮಾನ್ಯ ಭತ್ತಕ್ಕೆ 2,300 ರೂ., ಗೆ ್ರೀಡ್-ಎ ಭತ್ತಕ್ಕೆ 2,320 ರೂ., ಹೈಬ್ರಿಡ್ ಬಿಳಿ ಜೋಳಕ್ಕೆ 3,371 ರೂ., ಮಾಲ್ದಂಡಿ ಬಿಳಿಜೋಳಕ್ಕೆ 3,421 ರೂ.ರಂತೆ ಇಂದಿನಿಂದ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸಲಾಗಿದ್ದು, ರೈತರು ಆಧಾರ್ ಕಾರ್ಡ್ ಮತ್ತು ಎಫ್‌ಐಡಿ ಸಂಖ್ಯೆಯೊಂದಿಗೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೋಂದಣಿ ಮಾಡಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಪಂ ಅಧ್ಯಕ್ಷ ಶಾಮೀದ್ ಸಾಬ್, ಕಾರ್ಯದರ್ಶಿ ಎಂ.ಡಿ.ಫಾರೂಕ್ ಸಾಬ್ ಖಾಜಿ, ತಾಪಂ ಮಾಜಿ ಸದಸ್ಯ ಉಮರಸಾಬ್, ವಿಎಸ್‌ಎಸ್‌ಎನ್ ಅಧ್ಯಕ್ಷ ನಿಂಗಪ್ಪ ಗೋಸಬಾಳ, ನಿರ್ದೇಶಕ ಹನುಮಂತಗೌಡ, ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ನಾಯ್ಕರ್, ಪ್ರಮುಖರಾದ ಚನ್ನಬಸವ ದೇಸಾಯಿ, ಎಚ್.ರೆಡ್ಡಿ, ಯಂಕಣ್ಣ ಉಪ್ಪಾರ್, ಹನುಮಂತ ಗೌಡ್ರು, ಕನಕಪ್ಪ, ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ ಗುತ್ತೇದಾರ್, ಮಂಟೆಪ್ಪ ಎಲೆಕೂಡ್ಲಿಗಿ, ಕರಿಲಿಂಗಪ್ಪ ಹಳ್ಳಿ, ದೊಡ್ಡಪ್ಪ ಕಲ್ಗುಡಿ, ಕರಿಯಪ್ಪ ವಿರುಪಾಪುರ, ಸಿರಾಜ್‌ಪಾಷಾ ದಳಪತಿ, ಶರಣಪ್ಪ ರೇಡ್ಡರ, ಅಮರೇಶ ನಾಗರಬಿಂಚಿ ಇತರರಿದ್ದರು.