ಕಷ್ಟದಲ್ಲಿರುವ ಕೆವಿಎಸ್ ಕುಟುಂಬದ ಕೈಹಿಡಿಯಿರಿ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮನವಿ

K.S.Vijayananda)
Published on

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಕುಟುಂಬ ಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಕ್ಷೇತ್ರದ ಜನರು ಕೈಹಿಡಿಯಿರಿ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮನವಿ ಮಾಡಿದರು.

ನಗರದ ವಿವಿಧೆಡೆ ಮತಯಾಚನೆ ಮಾಡಿದ ಅವರು, ನಮ್ಮ ಕುಟುಂಬದ ಮೇಲೆ ಜನರಿಗೆ ಪ್ರೀತಿ ಮತ್ತು ವಿಶ್ವಾಸವಿದೆ. ಸ್ವಾಭಿಮಾನಿ ಪಡೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡಿದ್ದೇನೆ. ನನ್ನ ಕೈ ಶುದ್ಧವಿದ್ದು, ಒಮ್ಮೆ ಅವಕಾಶ ಕೊಡಿ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಜನರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕೆ.ವಿ.ಶಂಕರಗೌಡರ ಕುಡಿ ವಜ್ರದಂತ ಮನುಸುಳ್ಳ ವಿಜಯಾನಂದ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡಿ. ಇದುವರೆವಿಗೂ ನನಗೆ ಕೊಟ್ಟ ಸಹಕಾರವನ್ನು ವಿಜಯಾನಂದ ಅವರಿಗೆ ಕೊಡುವ ಮೂಲಕ ಅವರಿಗೆ ಆಶೀರ್ವಾದ ಮಾಡಿ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮುಖಂಡರಾದ ಮಹಾಲಿಂಗೇಗೌಡ, ಪೂರ್ಣಾನಂದ, ಸೂರಿ, ಕೃಷ್ಣ ನಾಯಕ್, ಬಿ.ಲೋಕೇಶ್, ವಿಶಾಲರಘು, ಜಯಶೀಲಮ್ಮ, ಕಲ್ಲಹಳ್ಳಿ ಶಂಕರೇಗೌಡ, ಬಸವರಾಜು ಇತರರಿದ್ದರು.

ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಗರದ ಹಲವು ವಾರ್ಡ್‌ಗಳಲ್ಲಿ ಮತಯಾಚನೆ ಮಾಡಲಾಯಿತು. ಕಲ್ಲಹಳ್ಳಿ 6ನೇ ವಾರ್ಡಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದಾಗ ನಗರಸಭಾ ಸದಸ್ಯ ರವಿ ನೇತೃತ್ವದಲ್ಲಿ ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net