ಸ್ವಾತಂತ್ರ್ಯ ದಿನದ ಇಲಾಖೆಯವರು ಹಣ ಸಂಗ್ರಹಿಸುವುದು ಬೇಡ - ಪೂರ್ತಿ ಖರ್ಚು ನನ್ನದು ಶಾಸಕ ಅಶೋಕ್ ಕುಮಾರ್ ರೈ

Published on

ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ೭೬ ನೇ ಸ್ವಾಂತತ್ರ್ಯ ಕಾರ್ಯಕ್ರಮ ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಬಳಿಕ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಸ್ವಾತಂತ್ರ್ಯ ದಿನ ಖರ್ಚನ್ನು ಅಧಿಕಾರಿಗಳ ಕೈಯಿಂದ ಹಾಕುತ್ತಿದ್ದು, ಈ ಬಾರಿಯ ಎಲ್ಲಾ ಖರ್ಚುಗಳನ್ನು ನಾನೇ ನೀಡುತ್ತೇನೆ ಎಂದು ಶಾಸಕರಾದ ಅಶೋಕ್ ರೈ ಅಧಿಕಾರಿಗಳಿಗೆ ವಾಗ್ದಾನ ನೀಡಿದ್ದರು.

ಸ್ವಾತಂತ್ರ್ಯ ದಿನದ ಖರ್ಚಿನ ಹಣವನ್ನು ವಿವಿಧ ಇಲಾಖೆಯಿಂದ ಒಟ್ಟುಗೂಡಿಸಿ ಅದನ್ನು ಬಳಸಲಾಗುತ್ತಿತ್ತು. ಇಲಾಖೆಗಳಿಂದ ಹಣ ಒಗ್ಗೂಡಿಸುವುದು ಬೇಡ ಅದು ಕೂಡಾ ಬ್ರಷ್ಟಾಚಾರದ ಒಂದು ಭಾಗವಾಗಿದೆ. ಯಾವುದೇ ಕಾರಣಕ್ಕೂ ಯಾವ ಇಲಾಖೆಯವರು ಸ್ವಾತಂತ್ರ್ಯ ಖರ್ಚಿಗೆ ಹಣ ನೀಡುವುದು ಬೇಡ ಎಷ್ಟು ಖರ್ಚಾಗುತ್ತದೆ ಎಂದು ತಿಳಿಸಿ ಆ ಮೊತ್ತವನ್ನು ನಾನು ನೀಡುವುದಾಗಿ ತಿಳಿಸಿದ್ದಾರೆ.

ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಸ್ವಂತ ಹಣದಿಂದ ಸರಕಾರಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದು, ಶಾಸಕರ ನಡೆಗೆ ಮತ್ತು ಬ್ರಷ್ಟಾಚಾರ ವಿರೋಧಿ ನಿಲುವಿಗೆ ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net