ದೆಹಲಿ ಪರೇಡ್‌ಗೆ ಸುಳ್ಯದ ವಿದ್ಯಾರ್ಥಿನಿ ಆಯ್ಕೆ

sahithy web
Published on

ಸುಳ್ಯ: ಆಗಸ್ಟ್ 15ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲು ತೆರಳಲಿರುವ ಕರ್ನಾಟಕ ರಾಜ್ಯ ತಂಡದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುಳ್ಯದ ಸಾಹಿತ್ಯ ಪುರುಷೋತ್ತಮ್ ಭಾಗವಹಿಸಲಿದ್ದಾರೆ.

ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಥಮ ಬಿಬಿಎ ವಿದ್ಯಾರ್ಥಿನಿ ಸಾಹಿತ್ಯ ಎನ್‌ಸಿಸಿ ತಂಡದಲ್ಲಿದ್ದು ಇತ್ತೀಚೆಗೆ ಕ್ಯಾಂಪ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದರು. ಮಂಗಳೂರು, ಉಡುಪಿ, ಕೊಡಗು ಮೂರು ಜಿಲ್ಲೆಯ ಎನ್‌ಸಿಸಿ ತಂಡದಿಂದ ಆಯ್ಕೆಯಾದ ಇಬ್ಬರಲ್ಲಿ ಸಾಹಿತ್ಯ, ಬೆಂಗಳೂರಿನಲ್ಲಿ ರಾಜ್ಯ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದು ಜುಲೈ 28ರಂದು ತಂಡದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈಕೆ ಸುಳ್ಯದ ಪಿಗ್ಮಿ ಸಂಗ್ರಾಹಕಿ ಹಾಗೂ ಗಾಯಕಿ ಕೇರ್ಪಳದ ಆರತಿ ಹಾಗೂ ಬೆಳ್ಳಾರೆ ಜ್ಞಾನಗಂಗಾ ಶಾಲೆಯ ವಾಹನ ಚಾಲಕ ಪುರುಷೋತ್ತಮ್ ದಂಪತಿಯ ಪುತ್ರಿ. ಲೆಫ್ಟಿನೆಂಟ್ ಬಾಮಿ ಅತುಲ್ ಶೆಣೈ ಎನ್‌ಸಿಸಿ ಶಿಕ್ಷಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net