8 ರಂದು ಮಂಗಳೂರು ನಗರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪಾದಯಾತ್ರೆ

IMG-20220806-WA0063
Published on


ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ನಗರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಆ. 10ರಂದು ಪಕ್ಷಾತೀತ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

ಅಂದು ಬೆಳಗ್ಗೆ 9.30ಕ್ಕೆ ಪಾಂಡೇಶ್ವರದ ನೆಹರೂ ಪ್ರತಿಮೆ ಬಳಿ ಹೂಮಾಲೆ ಅರ್ಪಿಸುವ ಮೂಲಕ ಆರಂಭಗೊಳ್ಳುವ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರು, ಇತರ ಸಂಘಸಂಸ್ಥೆ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸುವರು. ಎ.ಬಿ. ಶೆಟ್ಟಿ ಸರ್ಕಲ್, ಕ್ಲಾಕ್ ಟವರ್, ಕೊಡಿಯಾಲ್ ಬೈಲ್ , ಪಿವಿಎಸ್, ಬೆಸೆಂಟ್ ಆಗಿ ಲಾಲ್ ಬಾಗ್ ವೃತ್ತ ಮುಂಭಾಗಕ್ಕೆ ಪಾದಯಾತ್ರೆ ತಲುಪಲಿದೆ. ಅಲ್ಲಿ ಇರುವ ಗಾಂಧಿ ಪ್ರತಿಮೆಗೆ ಹಾರಾರ್ಪಣೆಯೊಂದಿಗೆ ಪಾದಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಅವರು ತಿಳಿಸಿದರು.
ದೇಶ ಪರವಾದ ಘೋಷಣೆ ಯೊಂದಿಗೆ ಶಿಸ್ತಿನ ಪಾದಯಾತ್ರೆ ಇದಾಗಲಿದ್ದು ಇದಕ್ಕಾಗಿ ಪೊಲೀಸರಿಂದ ಅನುಮತಿ ಕೂಡ ಪಡೆಯಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಟಿ.ಕೆ. ಸುಧೀರ್, ಸುನಿಲ್ ಪೂಜಾರಿ, ಹೈದರಾಲಿ, ಪ್ರೇಮನಾಥ್, ರಾಕೇಶ್ ದೇವಾಡಿಗ, ರಿತೇಶ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net