ಕರೊನಾ ವಾರಿಯರ್ಸ್​ಗೆ ಸ್ವಾತಂತ್ರೊ್ಯೕತ್ಸವ ಅರ್ಪಣೆ, ಶಾಸಕ ಬಿ. ಶಿವಣ್ಣ ಘೋಷಣೆ

15ank news and photos01
Published on

ಆನೇಕಲ್: ಕರೊನಾ ಪಿಡುಗಿನಲ್ಲಿ ಜೀವದ ಹಂಗು ತೊರೆದು ಜೀವಗಳನ್ನು ಉಳಿಸಲು ಹೋರಾಡುತ್ತಿರುವ ಎಲ್ಲ ಕರೊನಾ ವಾರಿಯರ್ಸ್​ಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಪಿಸಲಾಗುತ್ತಿದೆ ಎಂದು ಶಾಸಕ ಬಿ. ಶಿವಣ್ಣ ಘೋಷಿಸಿದರು.

ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ಏರ್ಪಾಡಾಗಿದ್ದ ಸ್ವಾತಂತ್ರೊ್ಯೕತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕರೊನಾ ಸೋಂಕಿನಿಂದ ದೂರವುಳಿಯಲು ಮುಂಜಾಗ್ರತೆ ವಹಿಸುವುದೇ ಮದ್ದು. ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳುವ ಜತೆಗೆ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಕರೊನಾ ಸೋಂಕಿನ 3ನೇ ಅಲೆಯಿಂದ ಬಚಾವಾಗಬೇಕು ಎಂದರು.

ಸಂವಿಧಾನದ ಹಕ್ಕುಗಳನ್ನು ಕೇಳುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ದೇಶ ಹಲವು ಭಾಷೆ, ಧರ್ಮ, ಪರಂಪರೆಯಿಂದ ಕೂಡಿದ್ದರೂ ವಿವಿಧತೆಯಲ್ಲಿ ಏಕತೆ ಎಂಬಂತೆ ನಾವೆಲ್ಲರೂ ಒಂದಾಗಿ ಬದುಕುತ್ತಿದ್ದೇವೆ ಎಂದು ಹೇಳಿದರು.

ತಹಸೀಲ್ದಾರ್ ದಿನೇಶ್ ಮಾತನಾಡಿ, ದೇಶ ಅಭಿವೃದ್ಧಿ ಸಾಧಿಸುವ ಮಾರ್ಗದಲ್ಲಿ ಸಾಗಿರುವಾಗಲೇ ಕರೊನಾ ಪಿಡುಗು ಅಡ್ಡಗಾಲು ಹಾಕಿದೆ. ಈ ಪಿಡುಗಿಗೆ ಹಲವು ಜನರು ಬಲಿಯಾಗಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು.

ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ವಿುಕರ ಸೇವೆ ಅವಿಸ್ಮರಣೀಯ ಎಂದರು.

ಪುರಸಭೆ ಮುಖ್ಯಾಧಿಕಾರಿ ನಟರಾಜು, ಸ್ವಾತಂತ್ರ್ಯ ಹೋರಾಟಗಾರ್ತಿ ಚೂಡೇನಹಳ್ಳಿ ಲಕ್ಷ್ಮಮ್ಮ, ತಾಪಂ ಇಒ ಲಕ್ಷ್ಮೀನಾರಾಯಣ, ಡಿವೈಎಸ್​ಪಿ ಮಲ್ಲೇಶ್, ಪುಸರಭೆ ಸದಸ್ಯರಾದ ಮುನಾವರ್, ಕೃಷ್ಣ, ಕೆ. ಶ್ರೀನಿವಾಸ್, ರವಿಚೇತನ್, ರಾಜಪ್ಪ, ಗಂಗಾಧರ್, ಭಾರತಿ, ಸುಧಾ, ಸಿಪಿಐ ಎಚ್.ಆರ್. ಮಹಾನಂದ್, ಬಿಇಒ ನರಸಿಂಹ ರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net