ತಂದ್ರೆ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ

IMG-20250816-WA0297
Published on

ಸಾಲಿಗ್ರಾಮ: ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರು ಮತ್ತು ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ್ ತಿಳಿಸಿದರು.

ತಂದ್ರೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ನಮ್ಮ ಜನರಲ್ಲಿ ದೇಶಭಕ್ತಿಯ ಅರಿವಿಲ್ಲದ ಪರಿಣಾಮ ನಮ್ಮ ಸ್ವಾತಂತ್ರ್ಯವನ್ನು ಬ್ರಿಟಿಷರು ಕಿತ್ತುಕೊಂಡಿದ್ದರು. ಬ್ರಿಟಿಷರ ಗುಲಾಮರಾಗಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ನಮ್ಮ ಮಹನೀಯರು ಎಲ್ಲರಲ್ಲೂ ಒಗ್ಗೂಡಿಸಿ ಹೋರಾಟ ಮಾಡಿ ತಮ್ಮ ಜೀವವನ್ನು ಬಲಿಕೊಟ್ಟು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆದರೆ ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಪಂ ಕಾರ್ಮಿಕರು ಮತ್ತು ಸಿಬ್ಬಂದಿಗೆ ಹೊಸ ಬಟ್ಟೆ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ರೇಣುಕಾ ವೆಂಕಟೇಶನಾಯಕ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಮಹಾದೇವಪ್ಪ, ಸದಸ್ಯರಾದ ಮಾದೇವ್, ಸಣ್ಣಸ್ವಾಮಿ, ಸುನೀತಾಸ್ವಾಮಿ, ಪವಿತ್ರಾ ಮಂಜು, ಸೌಂದರ್ಯ ಸಂಪತ್, ಪ್ರಮೀಳಾ ರಮೇಶ್, ಎಂ.ಕೆ.ಮದೇವ್, ನವೀನ ರಮೇಶ್, ಯೋಗೇಶ್, ವಿಎಸ್‌ಎಸ್ ಉಪಾಧ್ಯಕ್ಷ ವೆಂಕಟೇಶನಾಯಕ, ಸಿಬ್ಬಂದಿ ತಬ್ಸೂಂ, ಮುದಷೀರ್, ಸುಂದರೇಗೌಡ, ವೆಂಕಟೇಶ್, ಪ್ರಸನ್ನ, ರಾಕಿ, ರಮೇಶ್ ರಾಮೇಗೌಡ, ದ್ಯಾವಮ್ಮ, ಸಾಕಮ್ಮ, ಚಂದ್ರಶೇಖರ್, ಸತೀಶ್, ವಿರುಪಾಕ್ಷ, ಕೋಟೇಗೌಡ, ಸುಮಜಗದೀಶ್, ಸರ್ವಮಂಗಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net