ಸ್ವಾತಂತ್ರೃ ದಿನಾಚರಣೆಗೆ ಪೂರ್ವ ಸಿದ್ಧತೆ

08 TVG 01
ತಾವರಗೇರಾ ಪ.ಪಂ. ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೂರ್ವ ಭಾವಿ ಸಭೆ ನಡೆಯಿತು. ತಹಸೀಲ್ದಾರ ಅಶೋಕ ಶಿಗ್ಗಾವಿ, ನಬಿಸಾಬ ಖುದನವರ, ಪಿಎಸ್‌ಐ ಮಲ್ಲಪ್ಪ ವಜ್ರದ, ಶರಣಬಸವ ಇದ್ದರು.
Published on

ತಾವರಗೇರಾ: ಸ್ವಾತಂತ್ರೃ ದಿನಾಚರಣೆ ದಿನ ಸಾರ್ವಜನಿಕ ಧ್ವಜಾರೋಹಣ ನಂತರ ನಡೆಯುವ ಸಭೆಯಲ್ಲಿ, ನಿವೃತ್ತ ಯೋಧರಿಗೆ ಮತ್ತು ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ.ಪಂಯಿಂದ ಸನ್ಮಾನ ಮಾಡಬೇಕು ಎಂದು ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿಯಲ್ಲಿ ಗುರುವಾರ ಮಾತನಾಡಿದರು.
ಪ.ಪಂ.ಮುಖ್ಯಾಧಿಕಾರಿ ನಬಿಸಾಬ ಖುದನವರ ಮಾತನಾಡಿ, ಸಾರ್ವಜನಿಕ ಧ್ವಜಾರೋಹಣ ನಂತರ ಮಕ್ಕಳಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯುತ್ತಾದೆ. ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳು ಭಾಗವಹಿಸಬೇಕು ಎಂದರು.

ಮುಖ್ಯ ಶಿಕ್ಷಕರುಗಳಾದ ಡಾ.ಸುಭಾಷ್ ಪೋರೆ, ಮಲ್ಲಿಕಾರ್ಜುನ ಸೂಡಿ , ಪಂಪಾಪತಿ ಕೊರಲಿ, ಬಿ.ಆರ್.ಪಾಟೀಲ, ಅವರಡ್ಡಿ, ಅಜ್ಜಿ ನಾಗಲೀಕರ, ಪಿಎಸ್‌ಐ ಮಲ್ಲಪ್ಪ ವಜ್ರದ, ಪ.ಪಂ.ಸಿಬ್ಬಂದಿ ಶರಣಬಸವ ಸೈಂದರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net