

ಹನುಮಸಾಗರ: ಪಟ್ಟಣದ ವಿವಿಧೆಡೆ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗಾಂಧಿ ಸರ್ಕಲ್ನಲ್ಲಿ ಮತ್ತು ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಹನಮವ್ವ ಕಂದಗಲ್, ಪಿಡಿಒ ದೇವೇಂದ್ರಪ್ಪ ಕಮತರ ಇದ್ದರು.
ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವಿರೂಪಾಕ್ಷಪ್ಪ ಶೆಟ್ಟರ, ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ರೇಣುಕಾ ಹಾದಿಮನಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ವಿನಾಯಕ ಪಟ್ಟಣಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಕುರಬಗೇರಾ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಮುಖ್ಯಶಿಕ್ಷಕ ಹನುಮಂತಪ್ಪ ಬೋದುರ, ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಮುಖ್ಯಶಿಕ್ಷಕ ಹುಲ್ಲಪ್ಪ ಹಕ್ಕಿ, ಕೆಪಿಎಸ್ ಬಾಲಕರ ಪ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕ ಎಚ್.ಎಚ್.ಇಲಕಲ್, ಬಾಲಕಿಯರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ರಾಯಮ್ಮ ಉಕ್ಕಲಿ ಧ್ವಜಾರೋಹಣ ನೆರವೇರಿಸಿದರು.
ಉರ್ದು ಸರ್ಕಾರಿ ಪ್ರೌಢಶಾಲೆ, ಎಸ್‌ಬಿಐ ಬ್ಯಾಂಕ್, ಪಶು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಸಂಗೋಳ್ಳಿ ರಾಯಣ್ಣ ವೃತ್ತ, ಲಯನ್ಸ್ ಪಬ್ಲಿಕ್ ಸ್ಕೂಲ್, ನ್ಯಾಷನಲ್ ಸ್ಕೂಲ್, ಸರ್ವೋದಯ ಶಾಲೆ, ಜಿಬಿಎಚ್ ವಸತಿ ನಿಲಯ, ಬಿಸಿಎಂ ವಸತಿ ನಿಲಯ, ಆರ್‌ಎಂಎಸ್ ವಸತಿ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.