

ಮೈಸೂರು: ಜಿಲ್ಲೆಯ ಬನ್ನೂರಿನ ಸುಭಾಷ್‌ನಗರದಲ್ಲಿ ಪ್ರಜ್ಞಾವಂತ ಯುವಕರ ಜಾಗೃತಿ ಸಮಿತಿ ವತಿಯಿಂದ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದ ಮುಂಭಾಗ ಸೋಮವಾರ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪುಟಾಣಿ ಮಕ್ಕಳು ಧ್ವಜಾರೋಹಣ ನೆರವೇರಿಸಿದರು.
ಸಮಿತಿಯ ಯುವಕರು ಸುಭಾಷ್‌ನಗರ ಬಡಾವಣೆಯನ್ನು ತ್ರಿವರ್ಣ ಧ್ವಜಗಳಿಂದ ಸಿಂಗರಿಸಿದ್ದರು. ಇದರಿಂದ ಹಬ್ಬದ ವಾತಾವರಣ ಮನೆ ಮಾಡಿತ್ತು. ಪ್ರತಿ ಮನೆಯಲ್ಲಿ ರಾಷ್ಟ್ರೀಯ ಹಬ್ಬವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ವಿತರಿಸಲಾಯಿತು.