ಲಲಿತ್ ಕ್ಯಾಸಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

lalith
Published on

ಬೆಂಗಳೂರು: ರಾಜರಾಜೇಶ್ವರಿನಗರದ ಲಲಿತ್ ಕ್ಯಾಸಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ಡಾ. ಬಿ.ಎ.ಕಲಾಶಂಕರ್, ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ದೇಶಭಕ್ತಿ ನಿರಂತರವಾಗಿ ಎಲ್ಲರಲ್ಲೂ ಇರಬೇಕು. ಸ್ವಾತಂತ್ರ್ಯ ದಿವು ಇತಿಹಾಸದ ಅತ್ಯಂತ ಅಮೂಲ್ಯ ಕ್ಷಣಗಳನ್ನು ಸ್ಮರಿಸುವ ದಿನ. ಗಾಂಧೀಜಿಯವರ ಅಹಿಂಸಾವಾದ, ಭಗತ್ ಸಿಂಗ್‌ರ ಶೌರ್ಯ , ಸುಭಾಷ್ ಚಂದ್ರ ಬೋಸ್ ಅವರ ಸಂಕಲ್ಪಗಳ ಪ್ರತಿಫಲವಾಗಿದೆ. ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟೀಷರಿಂದ ಮುಕ್ತವಾಗುವುದಲ್ಲ. ಭಯದಿಂದ, ಅಜ್ಞಾನದಿಂದ, ಅನ್ಯಾಯದಿಂದ ಮುಕ್ತವಾಗಿ ದೇಶದ ಸ್ವಾತಂತ್ರ್ಯವನ್ನು ಕಾಪಾಡುವ ಹೊಣೆಗಾರಿಕೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತೀಯ ಸೇನೆಯ ಎಸ್‌ಪಿಜಿ ಅಧಿಕಾರಿ ಯೋಗೇಶ ಪೂವಯ್ಯ ಮಾತನಾಡಿ, ಗಗನದಲ್ಲಿ ಹಾರಾಡುವ ನಮ್ಮ ತ್ರಿವರ್ಣ ಧ್ವಜ ಕೇವಲ ಬಣ್ಣಗಳ ಸಂಕೇತವಲ್ಲ ಬದಲಿಗೆ ಏಕತೆ, ಧೈರ್ಯ ಮತ್ತು ಶಾಂತಿಯ ಪ್ರತೀಕವಾಗಿದೆ. ನಾವೆಲ್ಲರೂ ಒಂದಾಗಿ ೋಷಿಸುವ ಜೈ ಹಿಂದ್ ೋಷಣೆ ಕೇವಲ ಶಬ್ದವಲ್ಲ ನಮ್ಮೆಲ್ಲರ ಹೃದಯದ ತಾಳ ಎಂದು ಮಕ್ಕಳನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ವರ್ಗ, ಶಿಕ್ಷಕರು , ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net