ಅಮೆರಿಕದ ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

17
Published on


ಅಮೆರಿಕದ ಮೇರಿಲ್ಯಾಂಡ್‌ನ ಗೇಥರ್ಸ್‌ಬರ್ಗ್‌ಲ್ಲಿರುವ ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್‌ನಲ್ಲಿ ಮಂಗಳವಾರ 77ನೇ ಸ್ವಾತಂತ್ರೃ ದಿನವನ್ನು ಆಚರಿಸಲಾಯಿತು.


ಎನ್‌ಐಎಚ್‌ನ ಹಿರಿಯ ವಿಜ್ಞಾನಿ ಡಾ.ಪಾಂಡುರಂಗ ರೆಡ್ಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾವೆಲ್ಲ ಜನ್ಮಭೂಮಿಯಿಂದ ದೂರವಿದ್ದರೂ ಭಾರತೀಯತೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ದೇಶವನ್ನು ಸದಾ ಪ್ರೀತಿಸುತ್ತಲೇ ಇರುತ್ತೇವೆ. ಬದುಕು ಕಟ್ಟಿಕೊಳ್ಳಲು ಅನಿವಾರ್ಯವಾಗಿ ಪರದೇಶದಲ್ಲಿ ವಾಸಿಸುತ್ತಿದ್ದೇವೆ. ಆದರೆ ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ನಾವು ನಮ್ಮೊಂದಿಗೆ ಉಳಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಆಲಮಟ್ಟಿ ಡಾ.ರುದ್ರಮುನಿ ದೇವರು, ನಾಗೇಶ್ವರ್‌ರಾವ್, ಭಾರತಿ ರೆಡ್ಡಿ, ವೀಣಾ ತೋಟಕುರ, ಅಂಬಿಕಾ ನಾಗೇನಹಳ್ಳಿ, ಪುಷ್ಪಾ ನಿರಂಜನ್, ಸರೋಜಾ ರಾಜಶೇಖರ್, ಯಶಸ್ವಿನಿ ಬಾಲಾಜಿ, ಡಾ.ಕೊಂಡಲರೆಡ್ಡಿ, ಬಿಂದು ಗುರುರಾಜ್ ಮತ್ತು ಜೆಎಸ್‌ಎಸ್ ಸಂಡೇ ಸ್ಕೂಲ್ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಅನಿವಾಸಿ ಭಾರತೀಯರು ಹಾಗೂ ಮಿಷನ್‌ನ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net