ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬಿಬಿಎಂಪಿಯಿಂದ ಕಾಲ್ನಡಿಗೆ ಜಾಥ

jatha
Published on

ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಗೆ ಭಾರೀ ಸ್ಪಂದನೆ ವ್ಯಕ್ತವಾಯಿತು.

ಜಾಥ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಆರಂಭಗೊಂಡು ಹಡ್ಸನ್ ಸರ್ಕಲ್ ಮಾರ್ಗವಾಗಿ ಕಸ್ತೂರಿ ಬಾ ರಸ್ತೆ, ಕಬ್ಬನ್ ಪಾರ್ಕ್, ಎಂ.ಜಿ. ರಸ್ತೆಗೆ ಆಗಮಿಸಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮುಕ್ತಾಯ ಕಂಡಿತು.

ಇದಕ್ಕೂ ಮುನ್ನ ಜಾಥವನ್ನು ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಗಣ್ಯರು, ದೇಶಕ್ಕೆ ಸ್ವಾತಂತ್ರ್ಯ ಬಂದು 77ವರ್ಷಗಳು ಸಂದಿದೆ. ಸ್ವಾತಂತ್ರ್ಯ ಪಡೆಯಲು ಕೋಟ್ಯಂತರ ಭಾರತೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ದ, ಸಿಖ್ ಹಲವಾರು ಧರ್ಮ, ಅನೇಕ ಭಾಷೆ, ವಿಭಿನ್ನ ರೀತಿಯ ಸಂಸ್ಕೃತಿ ಸಂಪ್ರಾದಯವಿದೆ. ಅದರೆ, ನಮ್ಮಲ್ಲಿ ಐಕ್ಯತೆ, ಜಾತ್ಯತೀತತೆ, ಸಾಮರಸ್ಯ ಮತ್ತು ದೇಶಕ್ಕಾಗಿ ಮೊದಲು ನಾನು ಎಂಬ ಭಾವನೆ ಎಲ್ಲರಲ್ಲೂ ಮನೆಮಾಡಿದೆ.

ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ:

ಬಿಬಿಎಂಪಿ ಕೇಂದ್ರ ಕಛೇರಿ ಆಕಸ್ಮಿಕ ಬೆಂಕಿ ಆನಾಹುತದಲ್ಲಿ 9 ಮಂದಿ ಸುಟ್ಟಗಾಯದಿಂದ ನರಳುತ್ತಿದ್ದ ಸಂದರ್ಭದಲ್ಲಿ ತತಕ್ಷಣಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಸಹಕರಿಸಿದ ಹಲಸೂರು ಗೇಟ್ ಪೊಲೀಸ್ ಠಾಣೆಯ ಸಹಾಯಕ ಅರಕ್ಷಕ ನಿರೀಕ್ಷ ರಮೇಶ್ ಮತ್ತು ಹೆಡ್‌ಕಾನ್‌ಸ್ಟೇಬಲ್ ಶಿವಾನಂದ ಮತ್ತು ಹಲಸೂರು ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳ ಕಾರ್ಯಕ್ಷಮತೆ ಮೆಚ್ಚಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಎಚ್.ವಿ.ಅಶ್ವಥ್, ಎಸ್.ಜಿ.ಸುರೇಶ್, ಕೆ.ಜಿ.ರವಿ, ಸಾಯಿಶಂಕರ್, ರುದ್ರೇಶ್, ಕೆ.ಮಂಜೇಗೌಡ, ಸಂತೋಷ್‌ಕುಮಾರ್ ನಾಯಕ್, ಸುಬ್ರಮಣ್ಯಪದಕಿ, ರೇಣುಕಾಂಬ, ಎಇಇ ಉಮೇಶ್ ಮತ್ತು 500ಕ್ಕೂ ಹೆಚ್ಚು ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳು ಕಾಲ್ನಿಡಿಗೆ ಜಾಥದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net