ಮೇರಿಹಿಲ್ ಜೋಗರ್ಸ್ ಪಾರ್ಕ್ ನಿಂದ ಸ್ವಾತಂತ್ರ್ಯ ದಿನಾಚರಣೆ

IMG_20220815_185942
Published on

ಮಂಗಳೂರು: ಮೇರಿಹಿಲ್ ಜೋಗರ್ಸ್ ಪಾರ್ಕ್ ಇದರ ವತಿಯಿಂದ ಸೋಮವಾರ ಹೆಲಿಪ್ಯಾಡ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.


ಮನಪಾ ಸ್ಥಳೀಯ ಸದಸ್ಯೆ ಗಾಯತ್ರಿ ನಾಯಕ್ ಅವರು ಧ್ವಜಾರೋಹಣಗೈದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ಇದರ ಹಿಂದೆ ಹೋರಾಡಿದ, ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವುದು ಅತಿ ಅವಶ್ಯ. ಯುವ ಜನತೆ ದೇಶ ಪ್ರೇಮ ಬೆಳೆಸಿಕೊಂಡು ಉದಾತ್ತ ಕೊಡುಗೆ ನೀಡಬೇಕು ಎಂದರು.


ಹಿರಿಯರಾದ ಮೋಹನ್ ಮಾಡ, ನಾಗೇಶ್ ರಾವ್ ಕಲ್ಯಾಣಪುರ, ಸ್ಥಳೀಯ ಮುಖಂಡರಾದ ಉಮೇಶ್ ಠಾಕ್ರೆ, ಜೀವನ್ ಕುಲಾಲ್, ದಯಾನಂದ ಕುಲಾಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net