ಹೋರಾಟಗಾರರ ತ್ಯಾಗ ಬಲಿದಾನದ ಪ್ರತೀಕವೇ ಸ್ವಾತಂತ್ರ್ಯದ ಫಲ: ನಿವೃತ್ತ ಪ್ರಾಧ್ಯಾಪಕಿ ಲತಾ ಹೇಳಿಕೆ

Clg
Published on

ಮಂಡ್ಯ: ಹಿರಿಯ ಹೋರಾಟಗಾರರ ತ್ಯಾಗ-ಬಲಿದಾನದ ಪ್ರತೀಕವೇ ಸ್ವಾತಂತ್ರ್ಯದ ಫಲ ಎಂದು ಎಚ್.ಕೆ.ವೀರಣ್ಣಗೌಡ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಪಕಿ ಲತಾ ಹೇಳಿದರು.
ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಆಯೋಜಿಸಿದ್ದ 75ನೇ ಅಮೃತ ಸ್ವಾತಂತ್ರೊೃೀತ್ಸವ ದಿನಾಚರಣೆಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಹಿರಿಯರ ತ್ಯಾಗ-ಬಲಿದಾನ ಅಪಾರ. ಇದನ್ನು ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಹೋರಾಟಗಾರರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷಾಧಿಕಾರಿ ಪ್ರೊ.ಎಚ್.ಎಂ.ಹೇಮಲತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಗಟ್ಟಿಯಾಗಿ ನಿಲ್ಲಬೇಕಾದರೆ ಸಂವಿಧಾನ ಆಶಯಗಳಿಗೆ ಪೂರಕವಾದ ಕೆಲಸಗಳನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕನ್ನಡ ವಿಭಾಗದ ಡಾ.ಗೀತಾಮಣಿ ಕವಿತೆ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net