ಹಿರಿಯರ ತ್ಯಾಗ ನೆನೆಸುವ ಕಾರ್ಯ : ಕೆ.ಟಿ.ಸುವರ್ಣ ಹೇಳಿಕೆ

New Project (14)
Published on

ಉಳ್ಳಾಲ: ಅದೆಷ್ಟೋ ಮಂದಿಯ ತ್ಯಾಗ, ಜೀವ ಬಲಿದಾನದಿಂದ ಲಭಿಸಿದ ಸ್ವಾತಂತ್ರೃ ದಿನವನ್ನು ಸಂಭ್ರಮಿಸುವ ಜತೆ ಹಿರಿಯರ ತ್ಯಾಗ ನೆನೆಸುವ ಕಾರ್ಯವೂ ಆಗಬೇಕು, ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರ ಶ್ರಮ ಅಗತ್ಯ ಎಂದು ಸಮೃದ್ಧಿ ಹೌಸಿಂಗ್ ಸೊಸೈಟಿ ಗೌರವಾಧ್ಯಕ್ಷ ಕೆ.ಟಿ.ಸುವರ್ಣ ಹೇಳಿದರು.

ಸಮೃದ್ಧಿ ಹೌಸಿಂಗ್ ಸೊಸೈಟಿ ಆಶ್ರಯದಲ್ಲಿ ತೊಕ್ಕೊಟ್ಟು ಗಣೇಶ್ ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು.

ಸಮೃದ್ಧಿ ಹೌಸಿಂಗ್ ಸೊಸೈಟಿ ಅಧ್ಯಕ್ಷ ಭರತ್ ಕುಮಾರ್, ಕೋಶಾಧಿಕಾರಿ ರಾಜೇಶ್ ಕೆರೆಬೈಲ್, ನಿವೃತ್ತ ಎಎಸ್‌ಐ ಬಾಲಕೃಷ್ಣ, ಅರುಣ್ ಕುಮಾರ್, ಸೂರ್ಯಪ್ರಕಾಶ್ ಪಕ್ಕಳ, ಉಪಾಧ್ಯಕ್ಷರಾದ ರವಿ ಭಂಡಾರಿ ತೊಕ್ಕೊಟ್ಟು, ಪ್ರಭಾಕರ್, ಪ್ರಾನ್ಸಿಸ್, ಲೋಕನಾಥ ಸುವರ್ಣ, ಜಿತೇಶ್, ಮುರುಗೇಶ್ ಉಪಸ್ಥಿತರಿದ್ದರು.

ಪ್ರ.ಕಾ.ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net