ಹರ್‌ಘರ್ ಸ್ವಚ್ಛತೆಯೊಂದಿಗೆ ಸ್ವಾತಂತ್ರೊೃೀತ್ಸವ

c--ceoooo
Published on

ಚಿತ್ರದುರ್ಗ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹರ್‌ಘರ್ ತಿರಂಗಾ, ಹರ್‌ಘರ್ ಸ್ವಚ್ಛತೆಯೊಂದಿಗೆ ಸ್ವಾತಂತ್ರೊೃೀತ್ಸವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ಹೇಳಿದರು.

ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದೊಂದಿಗೆ ಆ.8ರಿಂದ ಆರಂಭವಾಗಿರುವ ಈ ಅಭಿಯಾನ 15ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಗ್ರಾಮ ಮತ್ತು ಗ್ರಾಪಂಗಳಲ್ಲಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆಗಳು, ಸಮುದಾಯ ಶುಚಿತ್ವ ಅಭಿಯಾನಗಳು, ಅರಿವು ಮೂಡಿಸುವ ಚಟುವಟಿಕೆಗಳು, ಜಲ ಸಂರಕ್ಷಣೆ ಮತ್ತು 15 ರಂದು ಅಮೃತ್ ಸರೋವರಗಳು, ಸಾರ್ವಜನಿಕ ಇತ್ಯಾದಿ ಪ್ರಮುಖ ಸ್ಥಳಗಳಲ್ಲಿ ಧ್ವಜಾರೋಹಣ ಸಮಾರಂಭ ಆಯೋಜಿಸಲಾಗುವುದು ಎಂದರು.

ಜಿಲ್ಲೆ, ತಾಲೂಕು ಮತ್ತು ಗ್ರಾಪಂ ಮಟ್ಟಗಳಲ್ಲಿ ಜರುಗುವ ಈ ಅಭಿಯಾನಗಳಲ್ಲಿ ಸ್ಥಳೀಯ ಸಂಸ್ಥೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಸ್ವ-ಸಹಾಯ ಸಂಘದ ಗುಂಪುಗಳ ಸದಸ್ಯರು, ವಿದ್ಯಾರ್ಥಿಗಳು, ಸ್ವಯಂ ಸೇವಕರು ಮತ್ತು ಮುಂಚೂಣಿ ಕಾರ‌್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಮುದಾಯದ ಸದಸ್ಯರು ಮತ್ತು ಶಾಲಾ ಮಕ್ಕಳು ಸೇರಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆ ವಿಧಿ ಸ್ವೀಕರಿಸಬೇಕು. ಗ್ರಾಪಂ ಮತ್ತಿತರ ಸರ್ಕಾರಿ ಕಟ್ಟಡಗಳು, ಅಮೃತ್ ಸರೋವರಗಳು ಮೊದಲಾದೆಡೆ ಹಾಗೂ ಮನೆಗಳು ಧ್ವಜಾರೋಹಣ ನೆರವೇರಿಸಬೇಕು ಎಂದು ತಿಳಿಸಿರುವ ಸಿಇಒ, ಸ್ವಚ್ಛತಾ ಚಾಂಪಿಯನ್ ಮತ್ತು ಸ್ವಯಂ ಸೇವಕರ ಕೊಡುಗೆಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net