ಭ್ರಷ್ಟತೆ, ಲಂಚಮುಕ್ತವಾದಾಗ ನಿಜ ಸ್ವಾತಂತ್ರೃ

mbr
Published on

ಮಲೆಬೆನ್ನೂರು: ಪರಕೀಯರಿಂದ ನಮಗೆ ಸ್ವಾತಂತ್ರೃ ದೊರೆತು 78 ವರ್ಷಗಳಾಗಿದೆ. ಆದರೆ, ನಮ್ಮವರಿಂದ ಆಗುತ್ತಿರುವ ಭ್ರಷ್ಟಾಚಾರ, ಲಂಚಕೋರತನದಿಂದ ಮುಕ್ತಿ ದೊರೆತಾಗ ಮಾತ್ರ ನಮಗೆ ನಿಜವಾದ ಸ್ವಾತಂತ್ರೃದೊರೆತಂತೆ ಎಂದು ನಿವೃತ್ತ ಪೋಸ್ಟ್ ಮಾಸ್ಟರ್ ಈಶ್ವರಪ್ಪ ನುಡಿದರು.

ಹೋಬಳಿಯ ಕಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸ್ವಾತಂತ್ರೋತ್ಸವದಲ್ಲಿ ಮಾತನಾಡಿದರು.
ಜನರಿಗೆ ಮೂಲಸೌಕರ್ಯಗಳನ್ನು ನೀಡಿ ಅಭಿವೃದ್ಧಿ ಮಾಡಬೇಕಾದ ಜನಪ್ರತಿನಿಧಿಗಳು ಕೇವಲ ಆಮಿಷಗಳನ್ನು ತೋರಿ ಪ್ರಜೆಗಳನ್ನು ಸೋಮಾರಿಗಳನ್ನಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಾಂತಪ್ಪ ಮುದುಕಪ್ಪನವರ, ಈಶ್ವರಪ್ಪ, ಬಸವನಗೌಡ, ಹಾಲಸಿದ್ದಪ್ಪ, ಕೆ. ದೊಡ್ಡಬಸಪ್ಪ, ಎಂ.ಪಿ. ರುದ್ರಪ್ಪ, ಗುರುಬಸಪ್ಪ, ಬಾವಿಕಟ್ಟಿ ಕುರುವತ್ಯಪ್ಪ, ಬಿ. ಷಣ್ಮುಖಪ್ಪ ಮತ್ತಿತರರನ್ನು ಗೌರವಿಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಸದಸ್ಯರಾದ ಮಲ್ಲಿಕಾರ್ಜುನ, ಗ್ರಾಮಸ್ಥರಾದ ಗಂಗಾಧರ, ಸುರೇಶ್ ಎಂ., ಹನುಮಂತಪ್ಪ, ಕೆಂಚಮ್ಮ, ಪತ್ರಕರ್ತ ಗಣೇಶ್ ಕಮ್ಲಾಪುರ, ಶಾಲಾ ಶಿಕ್ಷಕರಾದ ಪ್ರಭುಗೌಡ ಪಾಟೀಲ್, ಹರೀಶ್ ಎಚ್.ಎಂ., ರಾಮನಗೌಡ ಪ್ಯಾಟಿ, ಉಮಾದೇವಿ, ಕ್ಯಾರ್ಲಿನ್ ಓಲಿವರ್ ಫರ್ನಾಂಡಿಸ್, ಈರಮ್ಮ ಅಂಗರಗಟ್ಟಿ ಮತ್ತಿತರರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net