

ಹೊಸಪೇಟೆ: ಹೊಸಪೇಟೆ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ೭೭ ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ, ಸಡಗರದಿಂದ ಆಯೋಜಿಸಲಾಯಿತು. ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜು ಮತ್ತು ವಿವಿಧ ಸಂಘ- ಸಂಸ್ಥೆಗಳ ಕಚೇರಿಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸಲ್ಲಿಸಲಾಯಿತು.
ಶಾಸಕ ಎಚ್.ಆರ್.ಗವಿಯಪ್ಪ ಧ್ವಜರೋಹಣ:
ಸ್ವಾತಂತ್ರೊö್ಯÃತ್ಸವದ ನಿಮಿತ್ತ ಹೊಸಪೇಟೆಯ ಡಾ.ಪುನೀತ್ ರಾಜಕುಮಾರ್ ವೃತ್ತ, ಸ್ವಾತಂತ್ರ‍್ಯ ಉದ್ಯಾನವನ ಸೇರಿದಂತೆ ವಿವಿಧ ಕಡೆ ಶಾಸಕ ಎಚ್.ಆರ್.ಗವಿಯಪ್ಪ ಧ್ವಜಾರೋಹಣ ನೆರವೇರಿಸಿ, ಲಕ್ಷಾಂತರ ಜನ ದೇಶ ಭಕ್ತರ ಹೋರಾಟದ ಫಲವಾಗಿ ಸ್ವರಾಜ್ಯ ಸಿಕ್ಕಿದೆ ಎಂದು ಹೇಳಿದರು.
ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್, ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಕಿರಣಕುಮಾರ, ರಾಜೇಶ್ ಕರ್ವಾ, ಶ್ರೀರಾಮ ಇತರರಿದ್ದರು.
ಕೇಂದ್ರೀಯ ವಿದ್ಯಾಲಯ:
ಕೇಂದ್ರೀಯ ವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಧ್ವಜಾರೋಹಣ ನೆರವೇರಿಸಿದರು. ಸಹಾಯಕ ಆಯುಕ್ತ ನೋಂಗ್ಜಾಯ್ ಮಹಮದ್ ಅಲಿ ಶಾ, ಪ್ರಭಾರ ಪ್ರಾಚಾರ್ಯ ಪ್ರಕಾಶ, ಶಿಕ್ಷಕರಾದ ಮಂಜಪ್ಪ, ಹರಿನಾಥ ರೆಡ್ಡಿ, ರಮೀಜಾ, ದಿವ್ಯಾ ದೇಸಾಯಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗು ಪಾಲಕರು ಇದ್ದರು.
ಕೊಟ್ಟೂರುಸ್ವಾಮಿ ಸಂಸ್ಥಾನಮಠ:
ನಗರದ ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಶಾಲಾ ಕಾಲೇಜಿನ ಆವರಣದಲ್ಲಿ ನಗರದ ಖ್ಯಾತ ವೈದ್ಯ ಡಾ.ಮೃತ್ಯುಂಜಯ ವಸ್ತçದ ರಾಷ್ಟç ಪತಾಕೆ ಹಾರಿಸಿದರು. ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಾಲಿ ಸಿದ್ದಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದರು. ವಾರ್ಡ್ನ ಪ್ರಮುಖರಾದ ಎಚ್.ವಿ.ಶರಣಸ್ವಾಮಿ, ಕೆ.ಮಹಾಂತೇಶ, ಮುಖ್ಯಶಿಕ್ಷಕ ಸಿ.ಎಸ್.ಶರಣಯ್ಯ, ಉಮೇಶ ಕೇರಿ, ಎ.ಎಸ್.ಕುಷ್ಟಗಿ, ಬಿ.ಅರವಿಂದ, ಕುಮಾರಸ್ವಾಮಿ ಪಾಲ್ಗೊಂಡಿದ್ದರು.
೮೮ ಮುದ್ಲಾಪುರ ಶಾಲೆ:
ನಗರದ ೮೮ ಮುದ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷಿö್ಮದೇವಿ ರಾಷ್ಟç ಪತಾಕೆ ಹಾರಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಆಂಜನೇಯಲು, ನಗರಸಭೆ ಮಾಜಿ ಸದಸ್ಯ ಜಿ.ಪಂಪಾಪತಿ, ಪ್ರ¨ಭಾರಿ ಮುಖ್ಯಗುರು ಎಸ್.ರಮೇಶ, ದೇವಪ್ಪ, ಸಹ ಶಿಕ್ಷಕರಾದ ರಾಧಾ, ಪಾರ್ವತಿ, ಸಿರೀಶ ಇದ್ದರು.
ಕಾAಗ್ರೆಸ್ ಕಚೇರಿ:
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯ ನಿಮಿತ್ತ ದ್ವಜಾರೋಹಣ ನೆರವೇರಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಹೊಸಪೇಟೆಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್, ಮಾಜಿ ಬ್ಲಾಕ್ ಬ್ಲಾಕ್ ಅಧ್ಯಕ್ಷ ತಮ್ಮನಳ್ಳೆಪ್ಪ, ಜಿಲ್ಲಾ ಸೇವಾದಳ ಸಂಘಟಕ ಬಿ.ಮಾರೆಣ್ಣ ಇದ್ದರು.
ಪಿಬಿಎಸ್ ಸ.ಹಿ.ಪ್ರಾ ಶಾಲೆ:
ಇಲ್ಲಿನ ಚಿತ್ತವಾಡ್ಗಿಯ ಪಿಬಿಎಸ್ ಸಹಿಪ್ರಾ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಯುವರಾಜ್ ನಾಯ್ಕ ತ್ರಿವರ್ಣ ಧ್ವಜ ಹಾರಿಸಿದರು.
ಇಲಾಖೆಯ ಅಧಿಕಾರಿಗಳಾದ ಹುಲಿಬಂಡಿ, ಬಸವೇಶ್ವರ ಸ್ವಾಮಿ, ಮುಖ್ಯಶಿಕ್ಷಕಿ ಹೇಮಾವತಿ, ಸಹ ಶಿಕ್ಷಕರಾದ ಮಲ್ಲಯ್ಯ, ರೇಷ್ಮಾ ಕೆ, ಗಾಯತ್ರಿ ಟಿ. ಭಾಗವಹಿಸಿದ್ದರು.