

ಹುಬ್ಬಳ್ಳಿ: ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂದ ಪ್ರಾಂತ ಕಾರ್ಯಾಲಯ ಕೇಶವಕುಂಜದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ರಾಜಧಾನಿ ಕಾಲನಿ ನಿವಾಸಿ ವಾಸಂತಿ ದೇವಾಡಿಗ ಧ್ವಜಾರೋಹಣ ನೆರವೇರಿಸಿದರು.
ಸಂದ ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಬೇಕು, ವೈವಿಧ್ಯಮಯವಾದ ಉಡುಗೆ ತೊಡುಗೆಗಳ ಮಧ್ಯದಲ್ಲಿಯೂ ಸ್ವದೇಶಿ ಉಡುಪುಗಳನ್ನು ಬಳಸುವ ಪದ್ಧತಿ ರೂಢಿಸಿಕೊಳ್ಳಬೇಕು, ನಿತ್ಯ ವ್ಯವಹಾರ, ಮಾತುಗಳಲ್ಲಿ ಮಾತೃಭಾಷೆಯನ್ನೇ ಬಳಸಬೇಕು ಎಂದರು.
ಹಬ್ಬ, ನಾಡಹಬ್ಬಗಳನ್ನು ಭಾರತೀಯ ಪದ್ಧತಿಯಲ್ಲಿಯೇ ಆಚರಿಸಬೇಕು ಎಂದು ಹೇಳಿದರು.
ಹೆಗ್ಗೆರಿ ಹಾಗೂ ಸುತ್ತ್ತಲಿನ ಬಡಾವಣೆ ಜನರು ಭಾಗವಹಿಸಿದ್ದರು. ಜಗನ್ನಾತರಾವ ಕರಣಂ ಕಾರ್ಯಕ್ರಮ ನಿರೂಪಿಸಿದರು.