ಅನಿರ್ಧಿಷ್ಟಾವಧಿ ಮುಷ್ಕರ ಆರಂಭ ಇಂದು

22knk1
ಪ್ರಭಾರಿ ಪ್ರಾಚಾರ್ಯ ಮರ್ವಿನ್ ಡಿಸೋಜಾರಿಗೆ ಅತಿಥಿ ಉಪನ್ಯಾಸಕರಿಂದ ಮನವಿ ಸಲ್ಲಿಸಲಾಯಿತು. ಪ್ರಿಯಾಂಕಾ, ಮನೋಜ್, ಮಂಜುನಾಥ್, ವೀರೇಶ್, ಶಾಂತವ್ವ ಇತರರಿದ್ದರು.
Published on

ಕನಕಗಿರಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಿಕೆ ಸೇರಿ ಇತರೇ ಬೇಡಿಕೆಗಳಿಗೆ ಆಗ್ರಹಿಸಿ ನ.23ರಿಂದ ಆರಂಭವಾಗುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲವಾಗಿ ಕನಕಗಿರಿ ತಾಲೂಕಿನ ಅತಿಥಿ ಉಪನ್ಯಾಸಕರಿಂದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಮರ್ವಿನ್ ಡಿಸೋಜಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮಾದಿನಾಳ ಮಾತನಾಡಿ, ಹಲವು ವರ್ಷಗಳಿಂದ ಸೇವಾ ಭದ್ರತೆಯಿಲ್ಲದೇ, ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ಎಂದು ಸರ್ಕಾರಗಳನ್ನ ಒತ್ತಾಯಿಸುತ್ತಾ ಬರಲಾಗುತ್ತಿದೆ. ಆದರೆ, ಇದುವರೆಗೂ ಸರ್ಕಾರಗಳು ಸ್ಪಂದಿಸಿಲ್ಲ.

ಅದಕ್ಕಾಗಿ ನ.23ರಿಂದ ತರಗತಿಗಳಿಗೆ ಬಹಿಷ್ಕಾರ ಹಾಕಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಅತಿಥಿ ಉಪನ್ಯಾಸಕರಾದ ಬಾಳಪ್ಪ, ಮಾರುತೇಶ್, ಪ್ರಿಯಾಂಕಾ, ಮನೋಜ್, ಮಂಜುನಾಥ್, ವೀರೇಶ್, ಶಾಂತವ್ವ, ಸೋಮಶೇಖರ್, ದೇವೇಂದ್ರಪ್ಪ. ರವಿ, ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net