ಗುತ್ತಿಗೆದಾರರಿಂದ ಅನಿರ್ದಿಷ್ಟಾವ ಧರಣಿ

Oplus_131072
ನಗರದ ಕಾವೇರಿ ನೀರಾವರಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗದಲ್ಲಿ ಗುತ್ತಿಗೆದಾರರ ಸಂಘದಿಂದ ಗುರುವಾರ ಅನಿರ್ದಿಷ್ಟಾವ ಪ್ರತಿಭಟನೆ ಪ್ರಾರಂಭಿಸಲಾಯಿತು. ಚನ್ನಯ್ಯ, ಅಬ್ದುಲ್ ಅಜೀಜ್, ಎಸ್.ಆರ್.ಗೋವಿಂದರಾಜು ಇತರರಿದ್ದರು.
Published on

ನಂಜನಗೂಡು: ನಗರದ ಕಾವೇರಿ ನೀರಾವರಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗದಲ್ಲಿ ಗುತ್ತಿಗೆದಾರರ ಸಂಘದಿಂದ ಗುರುವಾರ ಅನಿರ್ದಿಷ್ಟಾವ ಪ್ರತಿಭಟನೆ ಪ್ರಾರಂಭಿಸಲಾಯಿತು.

ಕಾವೇರಿ ನೀರಾವರಿ ನಿಗಮದ ಅಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರ ಶಿವಕುಮಾರ್ ಮಾತನಾಡಿ, ಕಾವೇರಿ ನೀರಾವರಿ ನಿಗಮದ ನಂಜನಗೂಡು ವಿಭಾಗದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಬಿಲ್ ಪಾವತಿ ಮಾಡಲು ವಿಳಂಬ, ತಾರತಮ್ಯ ಮಾಡುತ್ತಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕಾರ್ಯಪಾಲಕ ಇಂಜಿನಿಯರ್ ಕಾವೇರಿ ರಂಗನಾಥ್ ಅವರನ್ನು ಸೇವೆಯಿಂದ ವಜಾಗೊಳಿಸಿ ತನಿಖೆಗೊಳಪಡಿಸಬೇಕು. ಎಸ್‌ಡಿಪಿ ಹಾಗೂ ನಿರ್ವಹಣೆಗೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಆದರೆ ಶೇ.10 ರಷ್ಟು ಹಣ ಕೊಡುವ ದೊಡ್ಡ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿದ ತಕ್ಷಣದಲ್ಲೇ ಮೊಬೈಲ್ ಮೂಲಕ ಬಿಲ್ ಪಾವತಿಸುತ್ತಾರೆ. ಕೋಟಿ ಕೋಟಿ ರೂ. ಪಾವತಿಸಿರುತ್ತಾರೆ. ಆದರೆ ನಮಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿಳಂಬ ಮಾಡುವ ಮೂಲಕ ಅಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಸಾಲ ಮಾಡಿ ಕಾಮಗಾರಿ ನಿರ್ವಹಿಸಿ ವರ್ಷಗಳೇ ಕಳೆದರೂ ಬಿಲ್ ಆಗಿಲ್ಲ. ಇದರಿಂದ ಗುತ್ತಿಗೆದಾರರು ಕಷ್ಟಕ್ಕೆ ಸಿಲುಕಿದ್ದಾರೆ. ಬಿಲ್ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಹೋದರೆ ವ್ಯವಸ್ಥಾಪಕ ನಿರ್ದೇಶಕರು ಸಿಗುತ್ತಿಲ್ಲ. ನಿಗಮದ ವ್ಯವಸ್ಥಾಪಕರು, ಕಾರ್ಯಪಾಲಕ ಇಂಜಿನಿಯರ್ ಅವರು ಈಗಾಗಲೇ ಕಾಮಗಾರಿ ನಿರ್ವಹಿಸಿದ ಕೆಲ ಗುತ್ತಿಗೆದಾರರಿಗೆ ಬಿಲ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಎಂ.ಡಿ. ಅವರ ಆದೇಶದಂತೆ ಬಿಲ್ ಪಾವತಿಸಲಾಗಿದೆ ಎಂದು ಹೇಳುತ್ತಾರೆ. ಅಕಾರಿಗಳು ತಾರತಮ್ಯ ಎಸಗಿದ್ದಾರೆ. ನಮಗೆ ಬಿಲ್ ಪಾವತಿಸಿ ನ್ಯಾಯ ಕೊಡಿಸುವ ತನಕ ಅನಿರ್ದಿಷ್ಟಾವ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಚನ್ನಯ್ಯ, ಅಬ್ದುಲ್ ಅಜೀಜ್, ಗುತ್ತಿಗೆದಾರರರಾದ ಎಸ್.ಆರ್.ಗೋವಿಂದರಾಜು, ಗಣೇಶಪ್ರಸಾದ್, ನಂಜಪ್ಪ, ಶಂಕರ್ ನಾಯ್ಕ, ಗುರುಸ್ವಾಮಿ, ಬಂಗಾರು, ಗೋವಿಂದರಾಜು, ದೀನಾ, ವೆಂಕಟೇಶ್, ಪುರುಷೋತ್ತಮ್, ಶಿವಬಸವಣ್ಣ, ಕಿರಣ್‌ಕುಮಾರ್, ಬಸವರಾಜು, ಸತೀಶ್, ನಾಗರಾಜು, ಮಹೇಶ್, ಸುಲ್ತಾನ್ ಶರ್ೀ, ಕಾಶಿ, ಚನ್ನಬಸಪ್ಪ, ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net