ಪೌರ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

IMG-20250529-WA0094
ಅರಸೀಕೆರೆ ನಗರಸಭೆ ಕಚೇರಿ ಎದುರು ನಗರಸಭೆ ಪೌರ ನೌಕರರು ಪ್ರತಿಭಟನೆ ನಡೆಸಿದರು. ಕಲಾವತಿ, ಜಗದೀಶ್, ರವಿಕುಮಾರ್, ಸುನೀಲ್, ಕಂದಾಯ ಅಧಿಕಾರಿಗಳಾದ ಮಂಜುನಾಥ್, ನರೇಂದ್ರ , ರೇವಣ್ಣ, ಲಿಂಗರಾಜು ಇದ್ದರು.
Published on

ಅರಸೀಕೆರೆ: ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರಸಭೆ ನೌಕರರು ಹಾಗೂ ಪೌರ ಕಾರ್ಮಿಕರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ನಗರಸಭೆ ಕಚೇರಿ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರಿಸಿ ಧರಣಿ ಆರಂಭಿಸಿದ ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಕೆಜಿಐಡಿ, ಆರೋಗ್ಯ ಸಂಜೀವಿನಿ ಸೌಲಭ್ಯ ಜಾರಿ ಮಾಡುವುದಾಗಿ ಭರವಸೆ ನೀಡಿ ಹಲವು ತಿಂಗಳು ಕಳೆದಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಇದರಿಂದ ಬೇಸತ್ತು ಹೋರಾಟದ ಹಾದಿ ಹಿಡಿಯಲಾಗಿದೆ. ನೌಕರರ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರ ಚಂದನ್ ಹೇಳಿದರು.

ಕಚೇರಿ ವ್ಯವಸ್ಥಾಪಕಿ ಕಲಾವತಿ, ಎಇಇ ಜಗದೀಶ್, ರವಿಕುಮಾರ್, ಸುನೀಲ್, ಕಂದಾಯ ಅಧಿಕಾರಿಗಳಾದ ಮಂಜುನಾಥ್, ನರೇಂದ್ರ, ಆರೋಗ್ಯ ನಿರೀಕ್ಷಕರಾದ ರೇವಣ್ಣ, ಲಿಂಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net