ನೀರಿಗಾಗಿ ಅನಿರ್ದಿಷ್ಟಾವಧಿ ಧರಣಿ ನಾಡಿದ್ದು

ಅರಕೇರಾದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮನಗೌಡ ಮಾತನಾಡಿದರು. ಪ್ರಮುಖರಾದ ತೇಜರಾಜ ನಾಯಕ, ಬಸವರಾಜ ಪೂಜಾರಿ, ಬಾಬು ತಾತ, ಶಿವನಗೌಡ ಹುನುಗುಂದಬಾಡ, ಹಾಜಿ ಬಾಬು ಮಸ್ತಾನ, ಮುದುಕಪ್ಪ ಗೌಡ, ರಾಜಶೇಖರ ಪಾಟೀಲ್, ಹನುಮಂತ್ರಾಯ ನಾಯಕ ಬುದ್ದಿನ್ನಿ, ಬಸವರಾಜ ಬುದ್ದಿನ್ನಿ ಇತರರಿದ್ದರು.
ಅರಕೇರಾದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮನಗೌಡ ಮಾತನಾಡಿದರು. ಪ್ರಮುಖರಾದ ತೇಜರಾಜ ನಾಯಕ, ಬಸವರಾಜ ಪೂಜಾರಿ, ಬಾಬು ತಾತ, ಶಿವನಗೌಡ ಹುನುಗುಂದಬಾಡ, ಹಾಜಿ ಬಾಬು ಮಸ್ತಾನ, ಮುದುಕಪ್ಪ ಗೌಡ, ರಾಜಶೇಖರ ಪಾಟೀಲ್, ಹನುಮಂತ್ರಾಯ ನಾಯಕ ಬುದ್ದಿನ್ನಿ, ಬಸವರಾಜ ಬುದ್ದಿನ್ನಿ ಇತರರಿದ್ದರು.
Published on

ಅರಕೇರಾ: ಎನ್‌ಆರ್‌ಬಿಸಿ ಕೆಳಭಾಗದ ರೈತರ ಬೇಡಿಕೆಗೆ ಅನುಗುಣವಾಗಿ ನೀರು ಹರಿಸದಿದ್ದರೆ ಮಾ.25ರಂದು ಚಿಕ್ಕ ಹೊನ್ನಕುಣಿ ಕ್ರಾಸ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮನಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ರೈತಪರ ಸಂಘಟನೆಗಳಿಂದ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನೀರಾವರಿ ಸಲಹಾ ಸಮಿತಿ ರೈತರ ತಾಳ್ಮೆ ಪರೀಕ್ಷಿಸುತ್ತಿದೆ. ಐಸಿಸಿ ಸಭೆ ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಾಗಿದೆ. ರೈತರ ಬೇಡಿಕೆಗೆ ಪ್ರಾಮುಖ್ಯ ಇಲ್ಲವಾಗಿದೆ. ಟೇಲೆಂಡ್ ಭಾಗದ ಜಮೀನುಗಳಿಗೆ ಐಸಿಸಿ ನಿರ್ಣಯದಂತೆ ನೀರು ಪೂರೈಸಿದರೆ ಸಾಲದು ಎಂದರು.

ರೈತ ಮುಖಂಡ ತೇಜರಾಜ ನಾಯಕ ಮಾತನಾಡಿ, ಡಿಸ್ಟ್ರಿಬ್ಯೂಟರ್ 11 ರಿಂದ 17ರ ವರೆಗೆ ಕೆಳ ಭಾಗದ ರೈತರಿಗೆ ನೀರಿನ ಅವಶ್ಯಕತೆ ಇದೆ. ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದು, ಹವಮಾನ ವೈಪರೀತ್ಯದಿಂದ ಬಿತ್ತನೆ ವಿಳಂಬವಾಗಿದ್ದರಿಂದ ಟೇಲೆಂಡ್ ಭಾಗಕ್ಕೆ ನೀರಿನ ಅಗತ್ಯ ಇದೆ. ಕಳೆದ ಎರಡು ವರ್ಷಗಳಿಂದ ನೀರಿನ ಕೊರತೆಯಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಏ.20ರವರೆಗೆ ನೀರು ಹರಿಸದಿದ್ದರೆ ಮುಂದಿನ ನಡೆ ತೀವ್ರವಾಗಲಿದೆ ಎಂದು ತಿಳಿಸಿದರು. ಈ ಕುರಿತು ಧ್ವನಿ ಎತ್ತಬೇಕಾದ ಶಾಸಕಿ ಕರೆಮ್ಮ ಜಿ ನಾಯಕ, ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಆರ್‌ಟಿಪಿಎಸ್, ವೈಟಿಪಿಎಸ್ ಸೇರಿ ತೆಲಂಗಾಣಕ್ಕೆ 7 ರಿಂದ 10 ಟಿಎಂಸಿ ನೀರು ಪೂರೈಸುತ್ತಿದ್ದಾರೆ. ಆದರೆ ಕೃಷಿಗೆ ನೀರು ಕೊಡುತ್ತಿಲ್ಲ ಎಂದು ದೂರಿದರು.

ಪ್ರಮುಖರಾದ ಬಸವರಾಜ ಪೂಜಾರಿ, ಬಾಬು ತಾತ, ಶಿವನಗೌಡ ಹುನುಗುಂದಬಾಡ, ಹಾಜಿ ಬಾಬು ಮಸ್ತಾನ, ಮುದುಕಪ್ಪ ಗೌಡ, ರಾಜಶೇಖರ ಪಾಟೀಲ್, ಹನುಮಂತ್ರಾಯ ನಾಯಕ ಬುದ್ದಿನ್ನಿ, ಬಸವರಾಜ ಬುದ್ದಿನ್ನಿ, ಶಿವಪ್ಪ ನಾಯಕ, ಅರ್ಜುನ ನಾಯಕ, ಮುದುಕಪ್ಪ ಪೂಜಾರಿ, ನಾಗರಾಜ ನಾಗೋಲಿ, ಶಾಂತಪ್ಪ, ಬಿ.ಚಿದಾನಂದ ಗಣೇಕಲ್, ಶರಬಣ್ಣ ಸಾಹುಕಾರ, ಹೊನ್ನಪ್ಪ ನಾಯಕ ಶಾಖಾಪುರ, ಅಜ್ಮೀರ್, ರಮೇಶ ಭೋವಿ ಆಲ್ದರ್ತಿ, ಬಸವರಾಜ ಜಾಗಟಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net