ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಿ

28nmt1-photo
Published on

ನ್ಯಾಮತಿ: ಕೆಜಿಡಿ, ಜಿಪಿಎಫ್, ಜ್ಯೋತಿ ಸಂಜೀವಿನಿ ಸೌಲಭ್ಯಗಳು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಪಂ ಕಚೇರಿ ಎದುರು ಪಪಂ ನೌಕರರು ಹಾಗೂ ಪೌರ ಕಾರ್ವಿುಕರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಪೌರಕಾರ್ವಿುಕರ ಸಂಘದ ತಾಲೂಕು ಅಧ್ಯಕ್ಷೆ ಜಯಮ್ಮ ನೇತೃತ್ವದಲ್ಲಿ ಪಪಂ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪಟ್ಟಣದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸರ್ಕಾರದ ನೌಕರರೆಂದು ಘೊಷಿಸಬೇಕು. ಕಳೆದ 20 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಾಹನ ಚಾಲಕರು, ಕಂಪ್ಯೂಟರ್ ಆಪರೇಟರ್, ಬೀದಿದೀಪ ನಿರ್ವಾಹಕರು, ವಾಟರ್​ವುನ್, ಕ್ಲೀನರ್, ಸಹಾಯಕರು (ಹೆಲ್ಪರ್), ಲೋಡರ್ರ್ಸ್​ಗಳನ್ನು ನೇರ ಪಾವತಿಯಡಿ ಪರಿಗಣಿಸಿ ಎಂದು ಮನವಿ ಮಾಡಿದರು.

ಪ್ರತಿಭಟನೆ ಶಾಂತಿಯುತವಾಗಿ ಬುಧವಾರವೂ ಮುಂದುವರಿದಿದ್ದು, ಬೇಡಿಕೆ ಈಡೇರುವ ತನಕ ನಿಲ್ಲಿಸುವುದಿಲ್ಲ ಎಂದು ಹೇಳಿದರು. ಪೌರ ಕಾರ್ವಿುಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಜಿ. ನಾಗರಾಜ್, ಕಾರ್ಯದರ್ಶಿ ಬಿ.ವಿ. ಗೋಪಾಲ್ ಸೇರಿ ಪಂಚಾಯಿತಿ ನೌಕರರು ಹಾಗೂ ಪೌರ ಕಾರ್ವಿುಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net