ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ

assault01
ಸಾಂದರ್ಭಿಕ ಚಿತ್ರ
Published on

ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ಅಡ್ಮಿಷನ್ ಅಧಿಕಾರಿ ನಿತ್ಯಾನಂದ ಎಂಬಾತ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ನೀಡಿದ ದೂರಿನನ್ವಯ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸ್ಟೆಲ್‌ನಿಂದ ಕಾಲೇಜಿಗೆ ನಡೆದುಕೊಂಡು ಹೋಗಿಬರುವಾಗ ಅಡ್ಡ ಹಾಕಿ ಆತನ ವಾಹನದಲ್ಲಿ ಬರುವಂತೆ ಏಕವಚನದಲ್ಲಿ ಕರೆಯುತ್ತಾನೆ. ಮಾನಕ್ಕೆ ಕುಂದುಂಟಾಗುವಂತೆ ಮಾತನಾಡುತ್ತಾನೆ.

ಹುಟ್ಟುಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಕೈಯನ್ನು ಅಸಭ್ಯ ರೀತಿಯಲ್ಲಿ ಹಿಡಿಯುವುದು, ಒಬ್ಬರೇ ಹೋಗುವಾಗ ಹಿಂಬಾಲಿಸಿಕೊಂಡು ಬರುವುದು ಮೊದಲಾದ ರೀತಿಯಲ್ಲಿ ಕಿರುಕುಳ ನೀಡುತ್ತಾನೆ. ಹಾಸ್ಟೆಲ್‌ನಲ್ಲಿ ತೊಂದರೆಯಾದಲ್ಲಿ ನನ್ನ ಜತೆಯಲ್ಲಿ ಇರಬಹುದು ಎಂದು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಮನೆಗೆ ಊಟಕ್ಕೆ ಕರೆಯುವುದು, ತಡರಾತ್ರಿ ಕರೆ ಮಾಡಿ ಕಿರುಕುಳ ನೀಡುತ್ತಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಇತ್ತೀಚೆಗೆ ವಿರ್ದ್ಯಾರ್ಥಿನಿಯೊಬ್ಬಳು ತನ್ನ ಊರಾದ ಭಟ್ಕಳಕ್ಕೆ ಹೋಗಿದ್ದಾಗ, ಈತ ಕರೆ ಮಾಡಿ ಕಾಲೇಜು ಕೆಲಸದ ನಿಮಿತ್ತ ನಿಮ್ಮ ಊರಿಗೆ ಬಂದಿದ್ದೇನೆ. ಬರುವೆಯಾ ಎಂದು ಕೇಳಿದ್ದಾನೆ. ಕಾಲೇಜಿನ ಕೆಲವು ವಿದ್ಯಾರ್ಥಿನಿಯರ ಜತೆ ಈತ ಅಸಭ್ಯ ರೀತಿಯಲ್ಲಿ ವರ್ತಿಸಿದ್ದು, ಮಾನಕ್ಕೆ ಕುಂದುಂಟು ಮಾಡಿದ್ದಾನೆ. ಕಳೆದ ಒಂದು ವರ್ಷದಿಂದ ಆತನ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net