ಸಾಲಬಾಧೆಯಿಂದ ನದಿಗೆ ಹಾರಿ ರೈತ ಆತ್ಮಹತ್ಯೆ

Boy Suside+1
Published on

ರಟ್ಟಿಹಳ್ಳಿ: ಸಾಲಬಾಧೆಯಿಂದ ರೈತರೊಬ್ಬರು ಕುಮುದ್ವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಪ್ಪರದಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ.

ಬಸನಗೌಡ ಶಿವಪ್ಪ ಗೌಡರ (54) ಮೃತ ರೈತ.

ಇವರು 4 ಎಕರೆ ಜಮೀನು ಹೊಂದಿದ್ದು ಬ್ಯಾಂಕ್​ ಹಾಗೂ ಕೈಗಡವಾಗಿ 4.35 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬೆಳೆ ಹಾಳಾಗಿದ್ದರಿಂದ ಮನನೊಂದು ಕುಮುದ್ವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net