

ಸವಣೂರ: ಸಾಲಬಾಧೆಯಿಂದ ರೈತರೊಬ್ಬರು ಕೆರೆಯಲ್ಲಿ ಮುಳಗಿ ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ನಾಗಪ್ಪ ಕ್ಕೀರಪ್ಪ ತಳವಾರ (42) ಮೃತ ರೈತ.
ಇವರು ಬ್ಯಾಂಕ್ ಹಾಗೂ ಕೈಗಡವಾಗಿ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಬೆಳೆ ಸರಿಯಾಗಿ ಬಾರದ ಕಾರಣ ಸಾಲ ತೀರಿಸಲಾಗದೆ ಮನನೊಂದು ಗ್ರಾಮದ ದೊಡ್ಡಕೆರೆಯಲ್ಲಿ ಮುಳಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.