

ಹಾವೇರಿ: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಪ್ರಶಾಂತ ರಾಜಪ್ಪ ಕೋರಿಶೆಟ್ರ (38) ಮೃತ ರೈತ.
ಇವರು ಸಹಕಾರ ಸಂದಲ್ಲಿ 5 ಸಾವಿರ ರೂ. ಹಾಗೂ ಕೈಗಡವಾಗಿ 5 ಲ ರೂ. ಸಾಲ ಮಾಡಿಕೊಂಡಿದ್ದರು. ಅತಿಯಾದ ಮಳೆಯಿಂದ ಬೆಳೆ ಬಾರದ ಕಾರಣ ಮನನೊಂದು ಮನೆಯ ಹಿತ್ತಲಿನ ಶೆಡ್ಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.