ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

snd-12-1
Published on

ಸಿಂದಗಿ: ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಶನಿವಾರ ಪಟ್ಟಣದ ಜಿ.ಪಿ.ಪೋರವಾಲ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.

ತಾಲೂಕು ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಯುವ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮೂಲಕ ಸಾಮಾನ್ಯ ಜನರ ಹೊಟ್ಟೆ ಮೇಲೆ ಬರೆ ಎಳೆದಿವೆ. ತೈಲ ಬೆಲೆ ಮಾತ್ರವಲ್ಲದೆ ಜನಸಾಮಾನ್ಯರಿಗೆ ಅಗತ್ಯವಿರುವ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ತೊಂದರೆ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಣ್ಣ ಸಾಲಿ, ಮುಸ್ತಾಕ ಮುಲ್ಲಾ, ಶರಣಪ್ಪ ವಾರದ, ಅಶೋಕ ಮನಗೂಳಿ, ಬಿ.ಸಿ.ಕೊಣ್ಣೂರ, ಮಲ್ಲು ಸಾವಳಸಂಗ, ಪರಶುರಾಮ ಕಾಂಬಳೆ ಮಾತನಾಡಿದರು.

ಪ್ರತಿಭಟನೆಯಲ್ಲಿ ಗೊಲ್ಲಾಳಪ್ಪಗೌಡ ರೂಗಿ, ಸಂತೋಷ ಹರನಾಳ, ಎಂ.ಎ.ಖತಿಬ, ಶಿವನಗೌಡ ಬಿರಾದಾರ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಅಯ್ಯುಬ ದೇವರಮನಿ, ಪುರಸಭೆ ಉಪಾಧ್ಯಕ್ಷ ಹಾಸಿಂ ಆಳಂದ, ಕೆ.ಡಿ.ಪೂಜಾರಿ, ಮಹಾದೇವ ಕೊಂಡಗೂಳಿ, ಪುರಸಭೆ ಸದಸ್ಯರಾದ ಶಾಂತವೀರ ಬಿರಾದಾರ, ಪ್ರತಿಭಾ ಕಲ್ಲೂರ, ನಿಂಗಣ್ಣ ಛಟ್ಟಿ, ರಾಮಚಂದ್ರ ರಾಠೋಡ, ಯುವ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್ ಆಳಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net