ಯುವ ಬರಹಗಾರರು ಸಾಹಿತ್ಯಾಭಿರುಚಿ ಮೈಗೂಡಿಸಿಕೊಳ್ಳಿ

20 ckm 3 (2)
ಚಿಕ್ಕಮಗಳೂರಲ್ಲಿ ಏರ್ಪಡಿಸಿದ್ದ ಸೇವಾದೀಕ್ಷ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಜಿ.ಬಿ.ಪವನ್, ವಿರೇಶ್‌ಕೌಲಗಿ, ಬಿಸಲೇಹಳ್ಳಿ ಸೋಮಶೇಖರ್, ಸಚಿನ್ ಸಿಂಗ್ ಇದ್ದರು.
Published on

ಚಿಕ್ಕಮಗಳೂರು: ಯುವ ಬರಹಗಾರರು ಹಾಗೂ ಸಾಹಿತ್ಯಾಸಕ್ತರನ್ನು ಹುಟ್ಟುಹಾಕುವ ಸಲುವಾಗಿ ಕಸಾಪ ವಿವಿಧ ಆಯಾಮಗಳ ಮೂಲಕ ಸಮ್ಮೇಳನಗಳನ್ನು ನಡೆಸಿ ಸಾಹಿತ್ಯದ ಕಂಪನ್ನು ಜಿಲ್ಲೆಯಾದ್ಯಂತ ಪಸರಿಸುವ ಕಾರ್ಯದಲ್ಲಿ ನಿರಂತರವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ನಗರದ ಕೆ.ಎಂ.ರಸ್ತೆ ಸಮೀಪದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದಿಂದ ಏರ್ಪಡಿಸಿದ್ದ ಸೇವಾ ದೀಕ್ಷ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾನಪದ ಸಮ್ಮೇಳನ, ದಾಸ ಸಾಹಿತ್ಯ, ಕಥಾ ಮತ್ತು ಕಾವ್ಯ ಕಮ್ಮಟ ಸೇರಿದಂತೆ ಹಲವಾರು ಸಾಹಿತ್ಯ ಚಟುವಟಿಕೆಗಳಿಗೆ ಪೂರಕವಾಗಿರುವ ಕಾರ್ಯಕ್ರಮ ನಡೆಸಿ ಯುವಕವಿಗಳನ್ನು ಬೆಳೆಸಲು ಮುಂದಾಗಿದೆ ಎಂದು ತಿಳಿಸಿದರು.
ನಾಡಿನ ಪ್ರತಿಯೊಬ್ಬ ರು ಕನ್ನಡ ರಥ ಎಳೆಯಲು ಸ್ವಯಂ ಪ್ರೇರಿತರಾಗಿ ಮುಂದಾದರೆ ಮಾತ್ರ ಭಾಷೆ ಸೊಗಡನ್ನು ಎಲ್ಲೆಡೆ ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸಾಹಿತ್ಯಾಭಿಮಾನಿಗಳು ಕಸಾಪದ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಪಾಲ್ಗೊಂಡು ಕವಿ, ಸಂತರು ಮತ್ತು ದಾರ್ಶನಿಕರ ಕೃತಿಗಳನ್ನು ಅಭ್ಯಾಸಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net