ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಿಸಿ

Inculcate national spirit in children
ಬಾದಾಮಿ ವೀರಶೈವ ಪ್ರಗತಿಶೀಲ ಸಂಘದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮವನ್ನು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಬಿ. ದೊಡ್ಡಪ್ಪನ್ನವರ ಉದ್ಘಾಟಿಸಿದರು. ಜೆ.ಪಿ. ನಂಜಯ್ಯನಮಠ, ಎಸ್.ಎಂ. ಮೇಟಿ, ಆರ್.ಐ. ಅರಕೇರಿ ಮತ್ತಿತರಿದ್ದರು.
Published on

ಬಾದಾಮಿ: ಮಕ್ಕಳಲ್ಲಿ ಸಾಮಾಜಿಕ ಸಮಾನತೆ ಅಭಿವೃದ್ಧಿಗೊಳಿಸಿ ರಾಷ್ಟ್ರೀಯ ಭಾವೈಕ್ಯ ಮೂಡಿಸಬೇಕೆಂದು ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಬಿ. ದೊಡ್ಡಪ್ಪನವರ ಹೇಳಿದರು.

ನಗರದ ವೀರಶೈವ ಪ್ರಗತಿಶೀಲ ಸಂಘದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಪೋಷಣಾ ಶಕ್ತಿ ನಿರ್ಮಾಣ ಯೋಜನೆಯಡಿ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ದಾಖಲಾತಿ ಹೆಚ್ಚಿಸುವುದು, ಶೈಕ್ಷಣಿಕ ವರ್ಷದ ಮಧ್ಯ ಶಾಲೆ ತೊರೆಯದಂತೆ ತಡೆಯುವುದು ಹಾಗೂ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದು ಅಕ್ಷರ ದಾಸೋಹ ಯೋಜನೆಯ ಮೂಲ ಧ್ಯೇಯವಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ವೀರೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಸಹಾಯಕ ವ್ಯವಸ್ಥಾಪಕ ಜೆ.ಪಿ. ನಂಜಯ್ಯನಮಠ, ಪ್ರಾಚಾರ್ಯ ಎಸ್.ಎಂ. ಮೇಟಿ, ಮುಖ್ಯಶಿಕ್ಷಕ ಆರ್.ಐ. ಅರಕೇರಿ, ಪಿ.ಎಚ್. ಅಸೂಟಿ, ಎಸ್.ಬಿ. ಪಾಟೀಲ ಹಾಗೂ ಪಾಲಕರು ಪಾಲ್ಗೊಂಡಿದ್ದರು. ಟಿ.ಎಸ್. ರಾಠೋಡ ನಿರೂಪಿಸಿದರು. ಸಿ.ಸಿ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net