ಇನ್‌ಕ್ಯುಬೇಶನ್ ಕಾರ್ಯಾಗಾರ

Published on

ಮಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಮ್. ಎಸ್.ಎಮ್.ಇ ನಿರ್ದೇಶನಾಲಯ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್, ಜಿಲ್ಲಾ ಕೈಗಾರಿಕಾ ಕೇಂದ್ರ, ದಕ್ಷಿಣ ಕನ್ನಡ ಹಾಗೂ ಎಂ.ಎಸ್.ಎಂ.ಇ ಡಿ.ಎಫ್.ಒ ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಯಾರ್ಂಪ್ ಯೋಜನೆಯಡಿಯಲ್ಲಿ ಇನ್‌ಕ್ಯುಬೇಶನ್ ಬಗ್ಗೆ ಕಾರ್ಯಾಗಾರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್, ಉದ್ಯಮಶೀಲತೆ ಮತ್ತು ಸಲಹಾ ವಿಭಾಗದ ಅಧ್ಯಕ್ಷ ಸವಿನ್ ಪ್ರೇಮಿ ಲೋಬೋ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಸಿ.ಟಿ.ಒ ಸಹ-ಸಂಸ್ಥಾಪಕ ಪ್ರವೀಣ್ ಕ್ಯಾಸ್ಟೆಲಿನೋ, ಕೆನರಾ ಚೇಂಬರ್ ಅಧ್ಯಕ್ಷ ಪಿ ಬಿ ಅಹಮದ್ ಮುದಸ್ಸರ್ ಮತ್ತಿತರರಿದ್ದರು. ಡಾ ರೂಬನ್ ಎಸ್ ವಿದ್ಯಾರ್ಥಿಗಳಿಗೆ ಇನ್‌ಕ್ಯುಬೇಶನ್ ಬಗ್ಗೆ ಮಾಹಿತಿ ನೀಡಿದರು. ಒಟ್ಟು 120 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net